ಉತ್ತರ ಪ್ರದೇಶದ ಲಖ್ನೋದಲ್ಲಿ ಕಾರ್ ನೊಳಗೆ ಕುಳಿತಿದ್ದರೂ ಕೂಡ ಟೋಯಿಂಗ್ ಸಿಬ್ಬಂದಿ ಕಾರ್ ಎಳೆದೊಯ್ದಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಶೇರ್ ಆದ ನಂತರ ತನಿಖೆಗೆ ಆದೇಶಿಸಲಾಗಿದೆ.
ಕಾರ್ ಚಾಲಕ ಸುನೀಲ್ ಮತ್ತು ಆತನ ಸ್ನೇಹಿತ ಹಜರತ್‌ಗಂಜ್‌ನ ಜನಪಥ್‌ನಲ್ಲಿ ವಸ್ತುಗಳನ್ನು ಖರೀದಿಗೆ ಹೋಗಿದ್ದರು. ವರದಿಯ ಪ್ರಕಾರ, ಇಬ್ಬರೂ ಏನು ಪಡೆಯಬೇಕೆಂದು ಮಾತನಾಡುತ್ತಿರುವಾಗ, ಟೋಯಿಂಗ್ ಟ್ರಕ್ ಸ್ಥಳಕ್ಕೆ ಆಗಮಿಸಿ ಕಾರ್ ಅನ್ನು ಎಳೆದುಕೊಂಡು ಹೋಗಲು ಪ್ರಾರಂಭಿಸಿತು, ಆದರೆ, ಅವರಿಬ್ಬರೂ ಇನ್ನೂ ಕಾರ್ ನೊಳಗೆ ಇದ್ದರೂ, ಎಳೆದೊಯ್ಯಲಾಗಿದೆ.
ನಿಯಮಗಳ ಪ್ರಕಾರ, ನೋ-ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ ಕಾರ್ ನೊಳಗೆ ವ್ಯಕ್ತಿ ಕುಳಿತಿದ್ದರೆ, ವಾಹನವನ್ನು ಎಳೆದುಕೊಂಡು ಹೋಗಬಾರದು.
ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ, ನಂತರ ಲಖ್ನೋ ಮುನ್ಸಿಪಲ್ ಕಮಿಷನರ್ ತನಿಖೆಗೆ ಆದೇಶಿಸಿದ್ದಾರೆ. ಪಾಲಿಕೆ ಆಯುಕ್ತ ಅಜಯ್ ದ್ವಿವೇದಿ ಮಾತನಾಡಿ, ಕ್ರೇನ್‌ಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಿದ್ದು, ಅವರಿಗೆ 1 ವರ್ಷದ ಗುತ್ತಿಗೆ ನೀಡಲಾಗಿದೆ. ಈ ಘಟನೆಯ ನಂತರ, ಲಖ್ನೋ ಅಧಿಕಾರಿಗಳು ಎಲ್ಲಾ ಕ್ರೇನ್ ಗಳ ಕಾರ್ಯಾಚರಣೆಯನ್ನು ನಿಷೇಧಿಸಿದ್ದಾರೆ. ಘಟನೆಯ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.