
ಬೆಂಗಳೂರು: ಕಾರ್ ನಲ್ಲಿದ್ದ ಚಿನ್ನಾಭರಣಗಳನ್ನು ತೃತೀಯ ಲಿಂಗಿಗಳು ಕಳವು ಮಾಡಿದ ಘಟನೆ ಬೆಂಗಳೂರು ಮಾಕಳಿ ಸಮೀಪ ನಡೆದಿದೆ.
ಬೇಗೂರಿನ ಮಂಜೇಶ್ ಅವರಿಗೆ ಸೇರಿದ ಕಾರ್ ನಲ್ಲಿದ್ದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಆರೋಪಿಗಳು ಪರರಿಯಾಗಿದ್ದಾರೆ. ರಾತ್ರಿ 11:30 ರ ವೇಳೆ ಮೂತ್ರ ವಿಸರ್ಜನೆಗೆ ಕಾರ್ ನಿಲ್ಲಿಸಿದಾಗ ಮಂಜುಳಾ, ಸಹನಾ, ಖುಷಿ, ರಿಷಿಕಾ ಕಾರ್ ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.