
ಬೆಂಗಳೂರು: ಬೆಂಗಳೂರಿನಲ್ಲಿ ಕುಖ್ಯಾತ ಅಂತಾರಾಜ್ಯ ಕಾರ್ ಕಳ್ಳರಿಬ್ಬರನ್ನು ಬಂಧಿಸಲಾಗಿದ್ದು, 1.20 ಕೋಟಿ ರೂಪಾಯಿ ಮೌಲ್ಯದ 9 ಐಷಾರಾಮಿ ಕಾರ್ ಗಳನ್ನು ಜಪ್ತಿ ಮಾಡಲಾಗಿದೆ.
ಅಶೋಕನಗರ ಠಾಣೆ ಪೋಲೀಸರು ಅಯಾಜ್ ಮತ್ತು ಮತಿನುದ್ದೀನ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳು ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶಗಳಲ್ಲಿ ಐಷಾರಾಮಿ ಕಾರ್ ಗಳನ್ನು ಕಳವು ಮಾಡುತ್ತಿದ್ದರು. ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಬಂಧಿತರ ಸಹಚರರಾದ ಸೈಯದ್, ಸಮೀರ್, ಡೆಲ್ಲಿ ಇಮ್ರಾನ್, ಯಾರಬ್, ತನ್ವೀರ್ ಗಾಗಿ ಅಶೋಕನಗರ ಠಾಣೆ ಪೋಲೀಸರು ಹುಡುಕಾಟ ನಡೆಸಿದ್ದಾರೆ.