
ಹಾಸನ: ಓವರ್ ಟೇಕ್ ವೇಳೆ ಹಿಂಬದಿಯಿಂದ ಕಾರ್ ಗೆ ಮತ್ತೊಂದು ಕಾರ್ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕಾರೇಕೆರೆ ಕೃಷಿ ಕಾಲೇಜು ಎದುರು ನಡೆದಿದೆ.
ಹಾಸನ ನಗರದ ಕೆ. ಹೊಸಕೊಪ್ಪಲು ನಿವಾಸಿ ಶಾಂತಮ್ಮ(45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ಆಲ್ಟೋ ಮತ್ತು ವ್ಯಾಗನಾರ್ ಕಾರ್ ಗಳು ಅಪಘಾತಕ್ಕೀಡಾಗಿವೆ. ಕಾರೇಕೆರೆ ಬಳಿ ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.