ಬೆಂಗಳೂರಿನ ನೆಲಮಂಗಲ ಟೋಲ್ ಬೂತ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಕಾರು ಚಾಲಕನೊಬ್ಬ ಯುವಕನನ್ನು ತನ್ನ ಕಾರಿನಿಂದ ಸುಮಾರು 50 ಮೀಟರ್‌ಗಳವರೆಗೆ ಎಳೆದೊಯ್ದಿದ್ದಾನೆ. ಈ ಸಂಪೂರ್ಣ ಘಟನೆ ಟೋಲ್ ಬೂತ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಓವರ್‌ಟೇಕ್ ಮಾಡುವ ವಿಚಾರದಲ್ಲಿ ನಡೆದ ಜಗಳದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಜಗಳ ಹೇಗೆ ಪ್ರಾರಂಭವಾಯಿತು ?
ಮಾಹಿತಿಯ ಪ್ರಕಾರ, ಎರಡು ವಾಹನಗಳು ಟೋಲ್ ಬೂತ್ ಬಳಿ ಬರುತ್ತಿದ್ದಂತೆ, ಅವುಗಳ ನಡುವೆ ಯಾವುದೋ ವಿಷಯಕ್ಕೆ ಜಗಳ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಾಣುವಂತೆ, ಕಾರಿನ ಚಾಲಕ ವ್ಯಕ್ತಿಯ ಶರ್ಟ್ ಅನ್ನು ಹಿಡಿದುಕೊಂಡು ಟೋಲ್ ಗೇಟ್ ತೆರೆದ ನಂತರವೂ ಬಿಡಲಿಲ್ಲ. ಹೀಗಾಗಿ ಸುಮಾರು 50 ಮೀಟರ್ ಎಳೆದ ನಂತರ ವ್ಯಕ್ತಿ ರಸ್ತೆಯ ಮೇಲೆ ಬಿದ್ದಾಗ, ಕಾರು ಚಾಲಕ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯ ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಟೋಲ್ ಪ್ಲಾಜಾದಲ್ಲಿ ಅಳವಡಿಸಲಾದ ಸಿಸಿ ಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ.
Shocking Incident in Bengaluru!
A man was dragged for 50 meters by a car at Nelamangala toll booth after an argument over overtaking. The entire incident was caught on CCTV. Police have launched an investigation to identify the accused. #Bengaluru #RoadRage #ViralVideo pic.twitter.com/mFJ8YOMXoQ
— Shubham Rai (@shubhamrai80) February 16, 2025