ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಬಿಎಂಡಬ್ಲ್ಯೂ ಹಣಕಾಸು ಸಂಸ್ಥೆಗಳಿಗೆ ವಂಚಿಸಿ 29 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಕ್ರೆಡಿಟ್ ಸೌಲಭ್ಯ ಪಡೆದಿದ್ದ ಕಾರ್ ಡೀಲರ್ ಒಬ್ಬರನ್ನು ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ಬಂಧಿಸಿದೆ.
ಕಾರುಗಳ ಮಾರಾಟದಿಂದ ಬಂದ ದುಡ್ಡನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಿದ್ದ ಆಪಾದಿತ ವಿಕಾಸ್ ಚಾವ್ಲಾ ಈ ವೇಳೆ ತಪ್ಪು ಲೆಕ್ಕ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಚಾವ್ಲಾ ಮಡದಿಯನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ. ಇದಕ್ಕೂ ಮುನ್ನ ಯುಪಿಪಿಸಿಎಲ್-ಪಿಎಫ್ ಕಾಂಡದ ಸಂಬಂಧ ವಿಕಾಸ್ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿತ್ತು.
ದಿನದಲ್ಲಿ 20 ಬಾರಿ ಕೈತೊಳೆಸುತ್ತಿದ್ದ ಕಂಪನಿ, ಉದ್ಯೋಗಿಗೆ ನೀಡಿದೆ 44 ಲಕ್ಷ ರೂ.
ವಾಹನಗಳ ಖರೀದಿಗೆಂದು 15 ಕೋಟಿ ರೂಪಾಯಿಗಳು ಹಾಗೂ ಬಿಡಿಭಾಗಗಳ ಖರೀದಿಗೆ 1.5 ಕೋಟಿ ರೂಪಾಯಿಗಳ ಕ್ರೆಡಿಟ್ ಸೌಲಭ್ಯವನ್ನು ವಿಕಾಸ್ ಪಡೆದಿದ್ದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದೆ. ಇದೇ ವೇಳೆ ಬಿಎಂಡಬ್ಲ್ಯೂನ ಆರ್ಥಿಕ ಸೇವೆಗಳ ಮೂಲಕ ಕಾರು ದಾಸ್ತಾನಿಗೆಂದು 12.5 ಕೋಟಿ ರೂಪಾಯಿಗಳನ್ನು ಪಡೆದಿದ್ದ ವಿಕಾಸ್, ಮಾರಾಟದಿಂದ ಬಂದ ದುಡ್ಡಿನ ತಪ್ಪು ಲೆಕ್ಕ ಕೊಟ್ಟಿದ್ದಾನೆ ಎಂದು ಪೊಲೀಸ್ ಹೆಚ್ಚುವರಿ ಆಯುಕ್ತ ಆರ್.ಕೆ. ಸಿಂಗ್ ತಿಳಿಸಿದ್ದಾರೆ.
ದಾಸ್ತಾನಿನಲ್ಲಿದ್ದ ವಾಹನಗಳನ್ನು ಹರಾಜಿಗಿಟ್ಟ ಆಪಾದಿತ, ಸುಳ್ಳು ಖಾತ್ರಿಗಳನ್ನು ಕೊಟ್ಟು ಸಾಲ ಪಡೆದು, ಮಾರಾಟದಿಂದ ಬಂದ ದುಡ್ಡನ್ನು ಬ್ಯಾಂಕುಗಳ ಖಾತೆಯಲ್ಲಿ ಇಡುವುದಾಗಿ ತಿಳಿಸಿದ್ದ. ಆದರೆ ವಾಹನಗಳ ಮಾರಾಟದ ದುಡ್ಡಿನ ತಪ್ಪು ಲೆಕ್ಕ ಕೊಟ್ಟು 26.5 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾನೆ ವಿಕಾಸ್ ಚಾವ್ಲಾ.