ತುಮಕೂರು: ಸಿಮೆಂಟ್ ಬಲ್ಕರ್ ಗೆ ಕಾರು ಡಿಕ್ಕಿಯಾಗಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಡಬಗೆರೆ ಬ್ರಿಡ್ಜ್ ಬಳಿ ನಡೆದಿದೆ.
ತಂದೆ ಗುರುರಾಜು (35) ಹಾಗೂ 2 ವರ್ಷದ ಪುತ್ರ ರಿಷಾಂಕ್ ಮೃತ ದುರ್ದೈವಿಗಳು, ಪತ್ನಿ ಹರ್ಷಿತಾ ಸ್ಥಿತಿ ಗಂಭೀರವಾಗಿದ್ದು, ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಗ ಜಿಲ್ಲೆಯ ಮುಂಡರಗಿಯಿಂದ ಕುಟುಂಬ ಬೆಂಗಳೂರಿಗೆ ಕ್ವಿಡ್ ಕಾರಿನಲ್ಲಿ ಹೊರಟಿತ್ತು. ಈ ವೇಳೆ ಕಡಬಗೆರೆ ಬ್ರಿಡ್ಜ್ ಬಳಿ ಮುಂದೆ ನಿಂತಿದ್ದ ಸಿಮೆಂಟ್ ಬಲ್ಕರ್ ಗೆ ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.