ನಟ ಸಿದ್ಧಾರ್ಥ್ ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಬಗ್ಗೆ ನನಗೆ ಸಂತೋಷವಿದೆ. ಆದರೆ ಮಹಿಳೆಯರನ್ನು ಆ ರೀತಿ ಟಾರ್ಗೆಟ್ ಮಾಡಬೇಡಿ ಎಂದು ಹೇಳಿದ್ದಾರೆ.
ಸಿದ್ಧಾರ್ಥ್ ಟ್ವೀಟ್ ಮಾಡಿ ನನ್ನ ಬಗ್ಗೆ ಮೊದಲು ಏನೋ ಹೇಳಿದರು ನಂತರ ಅವರೇ ಕ್ಷಮೆ ಕೇಳಿದ್ದಾರೆ. ಆ ಟ್ವೀಟ್ ವೈರಲ್ ಆಗಿದ್ದರ ಬಗ್ಗೆಯಾಗಲಿ, ನನ್ನ ಹೆಸರು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದರ ಬಗ್ಗೆ ನನಗೆ ಆಶ್ಚರ್ಯವಾಗಿದ್ದು ನಿಜ. ನಾನೇನೂ ಅವರ ಹತ್ತಿರ ಯಾವ ವಿಚಾರವಾಗಿಯು ಮಾತನಾಡಿಲ್ಲ. ಅವರು ಕ್ಷಮೆ ಕೇಳಿರುವುದಕ್ಕೆ ಸಂತೋಷವಾಗಿದೆ, ಯಾಕೆಂದರೆ ಇದು ಒಬ್ಬ ಹೆಣ್ಣಿನ ವಿಚಾರ. ಆದರೂ ಪರವಾಗಿಲ್ಲ, ಆದರೆ ನಾವಾಗಲಿ ಅಥವಾ ಯಾರೇ ಆಗಲಿ ಹೆಣ್ಣನ್ನು ಆ ರೀತಿ ಟಾರ್ಗೆಟ್ ಮಾಡಬಾರದು. ಈ ವಿಷಯಗಳ ಬಗ್ಗೆ ನಾನು ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ದೇವರು ಅವರನ್ನ ಆಶೀರ್ವದಿಸಲಿ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿನ ಲೋಪ ಕುರಿತು ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಬರೆದ ಟ್ವೀಟ್ ನಿಂದ ಸಿದ್ಧಾರ್ಥ್ ಟೀಕೆಗೆ ಗುರಿಯಾಗಿದ್ದರು. ಆ ನಂತರ ಸಿದ್ಧಾರ್ಥ್ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಕ್ಷಮೆ ಕೋರಿದ್ದರು.