ಹಳೇ ಕಾಲದಲ್ಲಿ ಜನರು, ಮಕ್ಕಳಿಗೆ ಛಡಿಯೇಟು ನೀಡ್ತಿದ್ದರು. ಮಕ್ಕಳ ಮೈಮೇಲೆ ದೊಡ್ಡ ಬರೆ ಬೀಳ್ತಿತ್ತು. ಆದ್ರೀಗ ಕಾಲ ಬದಲಾಗಿದೆ. ಮಕ್ಕಳಿಗೆ ಪಾಲಕರು ಮೊದಲಿನಷ್ಟು ಹೊಡೆಯುವುದಿಲ್ಲ. ಹಾಗಾಗಿ ಕೋಲಿನ ಅವಶ್ಯಕತೆಯಿಲ್ಲ.
ಆಗಿನ ಕಾಲದಲ್ಲಿ, ಗಿಡದ ಹೆಣೆ ಮುರಿದು ಛಡಿ ಮಾಡ್ತಿದ್ದರು. ಇದು ಆನ್ಲೈನ್ ಯುಗ. ಇಲ್ಲಿ ಎಲ್ಲ ವಸ್ತುಗಳೂ ಆನ್ಲೈನ್ ಸಿಗುತ್ತವೆ. ಮಕ್ಕಳಿಗೆ ಛಡಿ ಏಟು ನೀಡುವ ಪಾಲಕರು, ಗಿಡದ ಹೆಣೆ ಮುರಿಯಬೇಕಾಗಿಲ್ಲ. ಆನ್ಲೈನ್ ವೆಬ್ಸೈಟ್ ಅಮೆಜಾನ್ ಗೆ ಲಾಗಿನ್ ಆದ್ರೆ ಸಾಕು. ಅಮೆಜಾನ್ ಮಕ್ಕಳಿಗೆ ಹೊಡೆಯುವ ಛಡಿಯನ್ನು ಮಾರಾಟ ಮಾಡ್ತಿದೆ. ರೆಡ್ಡಿಟ್‌ನಲ್ಲಿ ಕೆಲ ಬಳಕೆದಾರರು ಇದ್ರ ಫೋಟೋ ಹಂಚಿಕೊಂಡಿದ್ದಾರೆ. ಅನೇಕರು ಫೋಟೋವನ್ನು ನಕಲಿ ಎಂದುಕೊಂಡಿದ್ದರು. ಆದ್ರೆ ಪರೀಕ್ಷೆ ಮಾಡಿದಾಗ ಇದು ನಿಜವೆಂಬುದು ಗೊತ್ತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ‘ಬೀಟಿಂಗ್ ಸ್ಟಿಕ್ ಫಾರ್ ಬೀಟಿಂಗ್ ಕಿಡ್ಸ್’ ಎಂದು ಅದರ ಮೇಲೆ ಬರೆಯಲಾಗಿದೆ. ಅಮೆಜಾನ್ ಸರ್ಚ್ ಆಯ್ಕೆಯಲ್ಲಿ ‘ಕೇನ್ ಸ್ಟಿಕ್ ಫಾರ್’ ಎಂದು ಬರೆದ ತಕ್ಷಣ, ಸ್ಟಿಕ್ ಕಾಣಿಸುತ್ತದೆ.ಇದು ಅಚ್ಚರಿಗೆ ಕಾರಣವಾಗಿದೆ.
ಅಮೆಜಾನ್, ಇಂಥ ವಸ್ತುಗಳನ್ನು ಮಾರಾಟ ಮಾಡ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಳ್ಳಿಗಳಲ್ಲಿ ಬಳಸುವ ಕೆಲ ವಸ್ತುಗಳನ್ನು ಹಾಗೂ ಹಳೆ ಕಾಲದಲ್ಲಿ ಬಳಸ್ತಿದ್ದ ವಸ್ತುಗಳನ್ನು ಮಾರಾಟ ಮಾಡಿದೆ.