alex Certify BIG NEWS: ಅಡಕೆ ಬೆಳೆಗಾರರಿಗೆ ಶಾಕ್: ‘ಕ್ಯಾನ್ಸರ್ ಕಾರಕ’ ಆಡಕೆ ನಿಯಂತ್ರಣಕ್ಕೆ WHO ಶಿಫಾರಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಡಕೆ ಬೆಳೆಗಾರರಿಗೆ ಶಾಕ್: ‘ಕ್ಯಾನ್ಸರ್ ಕಾರಕ’ ಆಡಕೆ ನಿಯಂತ್ರಣಕ್ಕೆ WHO ಶಿಫಾರಸು

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಮತ್ತೆ ಕ್ಯಾನ್ಸರ್ ಕಾರಕ ಪಟ್ಟ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದ್ದು, ಇದು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ. ತಂಬಾಕು ಮಾದರಿಯಲ್ಲಿ ಅಡಿಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಅಡಿಕೆ ಬೆಳೆಗಾರರಲ್ಲಿ ಮೂಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಡಿಕೆಯ ಕುರಿತು ಮತ್ತೆ ಮಹತ್ವದ ವರದಿ ಸಲ್ಲಿಸಲಾಗಿದ್ದು, ಅಡಕೆ ಕ್ಯಾನ್ಸರ್ ಕಾರಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳಕೆಗೆ ನಿಯಂತ್ರಣ ಹೇರಲು ಶಿಫಾರಸು ಮಾಡಲಾಗಿದೆ. ಅಡಕೆ ಬಳಕೆಯನ್ನು ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್ ತಗ್ಗಿಸಬಹುದೆಂದು ವರದಿ ಸಲ್ಲಿಸಲಾಗಿದೆ. ಅಡಕೆ ಕ್ಯಾನ್ಸರ್ ಕಾರಕ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಕಾನೂನು ಸಮರ ನಡೆಯುತ್ತಿದ್ದು, ಅಡಕೆಯು ಆರೋಗ್ಯದಾಯಕ ಎಂದು ಸಾಬೀತುಪಡಿಸಲಾಗಿದೆ. ಇದರ ನಡುವೆ ಇಂತಹುದೊಂದು ವರದಿ ಸಲ್ಲಿಕೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಂಘ ಸಂಸ್ಥೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ 2024ರ ಅಕ್ಟೋಬರ್ 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್ ಅಂಕಾಲಜಿ ಎಂಬ ಅಂತರಾಷ್ಟ್ರೀಯ ಜರ್ನಲ್ ನಲ್ಲಿ ಈ ವರದಿ ಪ್ರಕಟವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...