ಬೆಂಗಳೂರು : ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಮತ್ತೆ ಪತ್ರ ಬರೆದಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ರದ್ದುಪಡಿಸಿ, ಕಾನೂನಿನಡಿ ವಿಚಾರಣೆ ಎದುರಿಸಲು ಎಸ್ಐಟಿ ಗೆ ಕೇಂದ್ರ ಸರ್ಕಾರ ನೆರವಾಗುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬುದ್ದ ಪೂರ್ಣಿಮೆಯ ಶುಭಾಶಯ ಕೋರಿದ ಸಿಎಂ
ಸತ್ಯ, ಶಾಂತಿ, ಅಹಿಂಸೆ, ಪ್ರೀತಿಯ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧನ ಬೋಧನೆಗಳನ್ನು ಧರ್ಮದ ಎಲ್ಲೆ ಮೀರಿ ಇಡೀ ಜಗತ್ತು ಇಂದು ತನ್ನದಾಗಿಸಿಕೊಳ್ಳಬೇಕಿದೆ. ತತ್ವಜ್ಞಾನಿ, ದಾರ್ಶನಿಕ, ಮಹಾನ್ ಮಾನವತಾವಾದಿ ಭಗವಾನ್ ಬುದ್ಧನ ಜನ್ಮದಿನವಾದ ಇಂದು ಅವರ ಜೀವನಾದರ್ಶಗಳನ್ನು ನೆನೆಯೋಣ, ಅನುಸರಿಸೋಣ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.