ಮನೆ ಅಥವಾ ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಕೆನರಾ ಬ್ಯಾಂಕ್ ಅಗ್ಗದ ದರದಲ್ಲಿ ಸಾಲ ನೀಡ್ತಿದೆ. ಬ್ಯಾಂಕ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಹೆಚ್ಚಿನ ಬಡ್ಡಿ ಹೊರೆಯಿಲ್ಲದೆ ನೀವು ಸಾಲ ಪಡೆಯಬಹುದು. ಮನೆ, ಕಾರು ಖರೀದಿ ಮಾಡ್ಬಹುದು.
ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬಡ್ಡಿಯನ್ನು ನಮ್ಮ ಬ್ಯಾಂಕ್ ನೀಡ್ತಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದೆ. ಕೆನರಾ ಬ್ಯಾಂಕ್ ನ https://canarabankcsis.in/canaraila/newmain.aspx. ವೆಬ್ಸೈಟ್ ನಲ್ಲಿ ಎಲ್ಲ ಮಾಹಿತಿ ಲಭ್ಯವಿದೆ. ಬ್ಯಾಂಕ್ 7.35 ಎಂಸಿಎಲ್‌ಆರ್ ಆಧಾರದ ಮೇಲೆ ಸಾಲ ನೀಡ್ತಿದೆ. ಬ್ಯಾಂಕಿನ ಈ ಹೊಸ ದರಗಳು ಜೂನ್ 7 ರಿಂದ ಜಾರಿಗೆ ಬಂದಿವೆ.
https://canarabankcsis.in/canaraila/newmain.aspx ತೆರೆದ ನಂತ್ರ ನೀವು ಸಾಲದ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ, ಫಾರ್ಮ್ ಭರ್ತಿ ಮಾಡಿದ ನಂತ್ರ ಬ್ಯಾಂಕ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಈ ಲಿಂಕ್ ನಲ್ಲಿ ಇಎಂಐ ಬಗ್ಗೆ ಕೂಡ ಮಾಹಿತಿ ಪಡೆಯಬಹುದು.