alex Certify ಕೆನರಾ ಬ್ಯಾಂಕ್ ನಲ್ಲಿ ಮಲೆಯಾಳಂ ಭಾಷೆಯ ಚೆಕ್ ವಿತರಣೆ: ಗ್ರಾಹಕರ ಆಕ್ಷೇಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನರಾ ಬ್ಯಾಂಕ್ ನಲ್ಲಿ ಮಲೆಯಾಳಂ ಭಾಷೆಯ ಚೆಕ್ ವಿತರಣೆ: ಗ್ರಾಹಕರ ಆಕ್ಷೇಪ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಲಯಾಳಂ ಭಾಷೆಯ ಚೆಕ್ ವಿತರಿಸಲಾಗಿದೆ. ಇದರಿಂದಾಗಿ ಚೆಕ್ ನಲ್ಲಿ ಹೆಸರು ಇತರ ಮಾಹಿತಿ ಭರ್ತಿ ಮಾಡಲು ಸಾಧ್ಯವಾಗದೇ ಗ್ರಾಹಕರು ಪರದಾಡುವಂಥಾಗಿದೆ.

ಕರ್ನಾಟಕದಲ್ಲಿ ಅನ್ಯ ಭಾಷೆಯ ಚೆಕ್ ವಿತರಿಸುವುದು ಅಕ್ಷಮ್ಯವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥ ಬ್ಯಾಂಕ್ ವ್ಯವಸ್ತಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರ ಅಬ್ದುಲ್ ನವೀದ್ ಒತ್ತಾಯಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬ್ಯಾಂಕ್ ಮುಂದೆ ಕನ್ನಡಪರ ಸಂಘಟನೆಗಳೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ ಕುಲಕರ್ಣಿ, ಶಿರಾಳಕೊಪ್ಪ ಶಾಖೆಯಲ್ಲಿ ಮಲಯಾಳಂ ಭಾಷೆಯ ಚೆಕ್ ವಿತರಿಸಿದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...