ಸುಮಾರು 34 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರದಲ್ಲಿ ಎಸೆದ ಬಾಟಲಿಯು ನ್ಯೂಫೌಂಡ್‌ಲ್ಯಾಂಡ್ ದೇಶದ ಮಹಿಳೆಯೊಬ್ಬರಿಗೆ ಸಿಕ್ಕಿದೆ. ಈ ಕುರಿತು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಡಲತೀರದಲ್ಲಿ ಸಿಕ್ಕ ಬಾಟಲಿಯ ಚಿತ್ರವನ್ನು ಹಂಚಿಕೊಂಡಿರುವ ಅವರು, ಪ್ಲಾಸ್ಟಿಕ್ ಬಾಟಲಿಯನ್ನು ನಾನು ಕಂಡುಕೊಂಡಿದ್ದೇನೆ. ಇದರ ಒಳಗೆ ಸಂದೇಶವಿದ್ದು, ಅದು 34 ವರ್ಷಗಳ ಹಿಂದಿನದ್ದು ಎಂದಿದ್ದಾರೆ.
ಪೋರ್ಟ್ ಔ ಚಾಯಿಕ್ಸ್‌ನಲ್ಲಿರುವ ಫಾಕ್ಸ್ ಪಾಯಿಂಟ್‌ನಿಂದ 10 ಮೈಲಿ ದೂರದಲ್ಲಿರುವ ನೀರಿನಲ್ಲಿ ಈ ಬಾಟಲಿಯನ್ನು ಬಿಸಾಕಲಾಗಿತ್ತು. ಮೇ 29, 1989 ರಂದು ಬರೆದ ಸಂದೇಶವೊಂದು ಅದರಲ್ಲಿ ಇತ್ತು. ಅದು ಹಾಗೆಯೇ ಅಳಿಸದೇ ಉಳಿದಿರುವುದಾಗಿ ಮಹಿಳೆ ಹೇಳಿದ್ದಾರೆ.
ಬಾಟಲಿಯಲ್ಲಿರುವ ಸಂದೇಶದ ಬಗ್ಗೆ ಹೇಳಿದ ಅವರು, ಇದು ಗಾಳಿಯಿಲ್ಲದ ಬಿಸಿಲಿನ ದಿನವಾಗಿದೆ. ಈ ದಿನದಲ್ಲಿ ನಿನ್ನ ನೆನಪಾಗುತ್ತಿದ್ದು, ನಾನು ಪ್ರೀತಿಸುತ್ತೇನೆ ಎಂದು ಬರೆಯಲಾಗಿದೆ ಎಂದಿದ್ದಾರೆ. ಸಮುದ್ರದೊಳಗೆ ಅವಿತಿರುವ ಹೊಸ ಹೊಸ ವಿಷಯಗಳನ್ನು ಆವಿಷ್ಕಾರವನ್ನು ಮಾಡುವುದು ಎಂದರೆ ನನಗೆ ತುಂಬಾಖುಷಿಯಾಗಿದ್ದು, ಇದು ನನ್ನ ಬದುಕಿನ ರೋಚಕ ಘಟನೆ ಎಂದಿದ್ದಾರೆ.