ಸಹಜವಾದ ಕೂದಲಿಗೆ ಬಣ್ಣ ಹಾಕುವುದು ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಎಂಬಂತೆ ಶೋಕಿಯಾಗಿಬಿಟ್ಟಿದೆ. ಅದರಲ್ಲೂ ಹುಡುಗಿಯರಿಗೆ ಈ ಗೀಳು ಇನ್ನೂ ಹೆಚ್ಚು.
ಕೆನಡಾದ ಒಂಟಾರಿಯೋದ ಶೈಲೀನ್ ಗಾರ್ಟ್ಲಿ ಹೆಸರಿನ 23 ವರ್ಷದ ಈ ಯುವತಿಯ ಕಥೆ ಕೇಳಿದರೆ ನಿಮಗೆ ಹೇರ್‌ಡೈ ಎಂದರೆ ಭಯ ಹುಟ್ಟಬಹುದು.
ತನ್ನ ಸಹಜ ಸೌಂದರ್ಯಕ್ಕಿಂತಲೂ ಇನ್ನೂ ಸುಂದರವಾಗಿ ಕಾಣುವ ಆಸೆಯಿಂದ ಕೂದಲಿಗೆ ಡೈ ಮಾಡಿಕೊಂಡ ಶೈಲೀನ್, ಡೈನ ರಾಸಾಯನಿಕ ಪ್ರತಿಕ್ರಿಯೆಯಿಂದಾಗಿ ಆಕೆ ಮುಖವೇ ಗುರುತು ಸಿಗದಂತೆ ಆಗಿಬಿಟ್ಟಿದೆ.
BIG BREAKING: ಕೋವಿಡ್ ಸಭೆ ನಾಳೆಗೆ ಮುಂದೂಡಿಕೆ; ವೀಕೆಂಡ್ ಕರ್ಫ್ಯೂ ಭವಿಷ್ಯ ನಾಳೆಯೇ ನಿರ್ಧಾರ
ಡೈ ಮಾಡಿಸಿಕೊಂಡು ಮೊದಲು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಖುಷಿ ಪಡುವ ಆಸೆಯಿಂದ ಮನೆಗೆ ಬಂದ ಶೈಲೀನ್‌ಗೆ ತಲೆಯೆಲ್ಲಾ ವಿಪರೀತ ಕಡಿತ ಹತ್ತಿಕೊಂಡಿದೆ. ಮಾರನೇ ದಿನ ಆಕೆಯ ಮುಖ ಹಾಗೂ ಕತ್ತುಗಳು ಬಲೂನ್‌ನಂತೆ ಊದಿಕೊಂಡಿವೆ. ಅದೃಷ್ಟವಶಾತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಾರಾಗಿದ್ದಾರೆ ಶೈಲೀನ್.
ಡೈ ಉತ್ಪಾದಿಸಲು ಬಳಸುವ ಪಿಪಿಡಿ ಎಂಬ ರಾಸಾಯನಿಕದಿಂದ ಈ ಪ್ರತಿಕ್ರಿಯೆ ಉಂಟಾಗಿದೆ. ತಲೆಗೆ ಡೈ ಮಾಡಿಸಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಶೈಲೀನ್.