ಆಹಾರ ಮತ್ತು ಜೀವನ ಶೈಲಿಯ ಆಯ್ಕೆಗಳು ಪ್ರಪಂಚದಾದ್ಯಂತ ಪ್ರತಿದಿನ ಬದಲಾಗುತ್ತಿವೆ. ಜೊತೆಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಕ್ರಮಗಳು ಇವೆ. ಇದೀಗ ಟೊರೊಂಟೊ, ಕೆನಡಾದ ಲೇಖಕಿ ಟಿಫಾನಿ ಲೀ, ವಿಚಿತ್ರ ಹೇಳಿಕೆ ಕೊಟ್ಟಿದ್ದು ಅದೀಗ ವೈರಲ್ ಆಗಿದೆ.
ಆಹಾರ ಬರಹಗಾರನಾಗಿರುವ ಟಿಫಾನಿ ಲೀ ತಾವು ಇಲ್ಲಿಯವರೆಗೆ ತಿಂದಿರುವ ಆಹಾರಗಳ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ತಮ್ಮ 18 ತಿಂಗಳ ಮಗುವಿಗೂ ಎಲ್ಲವನ್ನೂ ತಿನ್ನಿಸುತ್ತಿರುವುದಾಗಿ ಹೇಳಿದ್ದಾರೆ.
ನಾನು ಕರಿದ ಟಾರಂಟುಲಾ ಕಾಲುಗಳಿಂದ ಹಿಡಿದು ಕೋಲಿನ ಮೇಲೆ ಚೇಳಿನವರೆಗೆ ಎಲ್ಲವನ್ನೂ ರುಚಿ ನೋಡಿದ್ದೇನೆ ಎಂದು ಅವರು ಬರೆದಿದ್ದು, ಮಗುವಿಗೂ ಇದನ್ನು ಕೊಡುತ್ತಿರುವುದಾಗಿ ಹೇಳಿದ್ದಾರೆ. ಟಿಫಾನಿ ಅವರು ಪ್ರಯಾಣ ಮಾಡುವಾಗ ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಇರುವೆಗಳು ಮತ್ತು ಕ್ರಿಕೆಟ್ ಕೀಟಗಳ ರುಚಿ ನೋಡಿರುವುದಾಗಿ ಹೇಳಿದ್ದಾರೆ.
“ಕುಟುಂಬದ ದಿನಸಿ ಬಿಲ್ ಅನ್ನು ಕಡಿಮೆ ಮಾಡುವ” ಪ್ರಯತ್ನದಲ್ಲಿ ಟಿಫಾನಿ ಹೀಗೆ ಆಹಾರದ ಬಗ್ಗೆ ಬರೆಯುವ ಹಾದಿ ಹಿಡಿದಿದ್ದಾರೆ. ಇದರಿಂದಾಗಿ ಪುಕ್ಕಟೆಯಾಗಿ ಎಲ್ಲವನ್ನೂ ತಿನ್ನಬಹುದು ಎನ್ನುವುದು ಅವರ ಅಭಿಮತ.
ಆಹಾರದ ವೆಚ್ಚವು ವಾರಕ್ಕೆ ಸುಮಾರು $250- $300 ಕ್ಕೆ ಏರಿಕೆಯಾಗಿತ್ತು. ಭಾರತೀಯ ಕರೆನ್ಸಿಯಲ್ಲಿ ಸುಮಾರು 25,000 ರೂ. ಇದರಿಂದಾಗಿ ಸಿಕ್ಕಿದ್ದೆಲ್ಲವನ್ನೂ ತಿಂದಿರುವುದಾಗಿ ಈಕೆ ಹೇಳಿಕೊಂಡಿದ್ದಾರೆ.