ಗ್ರೇಟರ್ ಟೊರೊಂಟೊ: ಭಾರತದಲ್ಲಿ ಉತ್ಪಾದಿಸಲಾದ 5 ಲಕ್ಷ ಡೋಸ್ ಕೊರೋನಾ ಪಡೆದುಕೊಂಡಿರುವ ಕೆನಡಾ ಧನ್ಯವಾದ ಹೇಳಿದೆ.
ಗ್ರೇಟರ್ ಟೊರೊಂಟೊ ಪ್ರದೇಶ ಸೇರಿದಂತೆ ಹಲವೆಡೆ ಬೃಹತ್ ಜಾಹಿರಾತು ಫಲಕಗಳನ್ನು ಹಾಕುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಭಾರತಕ್ಕೆ ಧನ್ಯವಾದಗಳು ಎಂದು ಹೇಳಲಾಗಿದೆ.
ಜನವರಿ 20 ರಂದು ಭಾರತದ ಮೇಡ್ ಇನ್ ಇಂಡಿಯಾ ಕೊರೋನಾ ಲಸಿಕೆಗಳ ಸರಬರಾಜು ಆರಂಭಿಸಿದ ನಂತರ ಭಾರತದಿಂದ ವಿದೇಶಗಳಿಗೆ 481 ಲಕ್ಷ ಡೋಸ್ ಕೊರೋನಾವೈರಸ್ ಲಸಿಕೆಗಳನ್ನು ರಫ್ತು ಮಾಡಲಾಗಿದೆ. ಕೆನಡಾ ಕೂಡ 5 ಲಕ್ಷ ಡೋಸ್ ಲಸಿಕೆ ಪಡೆದುಕೊಂಡಿದ್ದು, ಈ ಕಾರಣದಿಂದ ಭಾರತಕ್ಕೆ ಧನ್ಯವಾದ ಹೇಳಲಾಗಿದೆ. ಧನ್ಯವಾದ ಹೇಳಲು ವಿಭಿನ್ನ ಮಾರ್ಗ ಅನುಸರಿಸಿರುವ ಕೆನಡಾ ಬೃಹತ್ ಜಾಹಿರಾತು ಫಲಕಗಳನ್ನು ಅಳವಡಿಸಿದೆ.