ʼದೀಪಾವಳಿʼ ಸ್ಟಾಂಪ್ ಬಿಡುಗಡೆ ಮಾಡಿದ ಕೆನಡಾ ಪೋಸ್ಟ್ 28-10-2021 6:42AM IST / No Comments / Posted In: Latest News, Live News, International ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆಯಷ್ಟೆ. ಹಿಂದೂಗಳು ಈ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ಆಚರಿಸುತ್ತಾರೆ. ವಿದೇಶಗಳಲ್ಲೂ ಕೂಡ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಕೆನಡಾದಲ್ಲಿ ದೀಪಾವಳಿ ಹಬ್ಬದ ನೆನಪಿಗಾಗಿ ಅಂಚೆಚೀಟಿ ಬಿಡುಗಡೆ ಮಾಡಲಾಗಿದೆ. ದೀಪಾವಳಿ ದಿನದಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ ದೀಪಗಳ ಹಬ್ಬವನ್ನು ಗುರುತಿಸಲು ಕೆಂಪು ರಂಗೋಲಿಯ ಬಣ್ಣದ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ದೀಪಾವಳಿ ಸ್ಟಾಂಪ್ ಅನ್ನು ಬಿಡುಗಡೆ ಮಾಡಿದೆ. ದೀಪಾವಳಿ ಆಚರಣೆಗೆ ಕೇವಲ ಎರಡು ವಾರಗಳ ಮೊದಲು ಅಂದ್ರೆ ಅಕ್ಟೋಬರ್ 19 ರಂದು ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಗಿದೆ. ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಈ ವಿಶೇಷ ಸ್ಟ್ಯಾಂಪ್ ಅನ್ನು ಸೆಯುಂಗ್ ಜೈ ಪೇಕ್ ವಿನ್ಯಾಸಗೊಳಿಸಿದ್ದಾರೆ. ಈ ದೀಪಾವಳಿ ಸ್ಟ್ಯಾಂಪ್ 8 ಮಿಲಿಯನ್ ಸ್ಟ್ಯಾಂಪ್‌ಗಳ ಮುದ್ರಣದೊಂದಿಗೆ ಲಭ್ಯವಿರುತ್ತದೆ. ಇದು ಅಧಿಕೃತ ಮೊದಲ ದಿನದ ಕವರ್‌ನಲ್ಲಿಯೂ ಸಹ ಲಭ್ಯವಿರುತ್ತದೆ. ಕೆನಡಾ ಪೋಸ್ಟ್ ದೀಪಾವಳಿ ಸ್ಟ್ಯಾಂಪ್ ಅನ್ನು ಬಿಡುಗಡೆ ಮಾಡಿದ್ದು ಇದೇ ಮೊದಲಲ್ಲ. 2017 ರಲ್ಲಿ ಮೊದಲ ಬಾರಿಗೆ ದೀಪಾವಳಿ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದಾರೆ. Thanks @canadapostcorp @postescanada for the heartwarming gesture of issuing a commemorative stamp to mark the Festival of Lights #Diwali. Kudos to designer Seung Jai Paek for bringing out the colors of #India through the bright red rangoli pattern.@HCI_Ottawa @IndianDiplomacy. pic.twitter.com/rRf3QlMMbp — IndiainToronto (@IndiainToronto) October 26, 2021