ಕೆನಡಾದ ಕ್ಯಾಲ್ಗರಿಯಲ್ಲಿರುವ ಬೋ ವ್ಯಾಲಿ ಕಾಲೇಜು ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ‘ಭಾರತೀಯ’ ಯುವತಿಯನ್ನು ಹಿಂಸಾತ್ಮಕವಾಗಿ ತಳ್ಳಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನೀಲಿ ಬಣ್ಣದ ಜಾಕೆಟ್ ಮತ್ತು ಗಾಢ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಯೊಬ್ಬ ಕಪ್ಪು ಬಟ್ಟೆ ಧರಿಸಿ ಬ್ಯಾಗ್ ಹೊತ್ತಿದ್ದ ವಿದ್ಯಾರ್ಥಿನಿಯಂತಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ವ್ಯಕ್ತಿ ಯುವತಿಯ ಕುತ್ತಿಗೆ ಹಿಸುಕಲು ಪ್ರಯತ್ನಿಸಿದ ದೃಶ್ಯಗಳು ವಿಡಿಯೊದಲ್ಲಿವೆ. ಆದರೆ, ಆತ ಯುವತಿಯ ಮೇಲೆ ಹಲ್ಲೆ ನಡೆಸಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ರೈಲು ನಿಲ್ದಾಣದಲ್ಲಿದ್ದ ಇತರರು ಸಹಾಯಕ್ಕೆ ಬರಲಿಲ್ಲ.
ಈ ಘಟನೆಯಲ್ಲಿ ಹಲ್ಲೆಗೊಳಗಾದ ಯುವತಿ ಭಾರತೀಯ ಮೂಲದವಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುರುಕ್ಷೇತ್ರದ 23 ವರ್ಷದ ಯುವತಿಯನ್ನು ಕೆನಡಾದ ಸರೆ ಪ್ರದೇಶದಲ್ಲಿ ಕೊಲೆ ಮಾಡಲಾಗಿತ್ತು. ಆಕೆ ಗಿಲ್ಡ್‌ಫೋರ್ಡ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ವರದಿಯಾಗಿದೆ.
Visuals have emerged from the City Hall/Bow Valley College Train Station in Calgary, Canada, where a man violently pushed a girl on the platform. Shockingly, no one nearby stepped in to help her. Several social media posts claim that the girl is of Indian origin. pic.twitter.com/ABSvrj7ZoZ
— Gagandeep Singh (@Gagan4344) March 24, 2025