ಕೆನಡಾದ ದೇವಸ್ಥಾನದಲ್ಲಿ ಪೂಜೆಗೆ ತೆರಳಿದ್ದ ಹಿಂದೂ ಭಕ್ತರ ಮೇಲೆ ಖಲಿಸ್ತಾನಿ ಬೆಣಲಿಗರು ಮಾರಣಂತಿಕ ಹಲ್ಲೆ ನಡೆಸಿದ್ದಾರೆ.
ಈ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ರೋ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಹಂಸಾಚಾರ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಹಿಂದೂ ದೇವಾಲಯಕ್ಕೆ ಪೂಜೆಗೆಂದು ಬಂದಿದ್ದ ಭಕ್ತರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋವನ್ನು ಕೆನಡಾದಲ್ಲಿರುವ ಭರತೀಯ ಮೂಲದ ಸಂಸದ ಚಂದ್ರ ಆರ್ಯ ಹಂಚಿಕೊಂಡಿದ್ದಾರೆ.
2022ರಿಂದ ಈಚೆಗೆ ಕೆನಡಾದಲ್ಲಿರುವ 20ಕ್ಕೂ ಹೆಚ್ಚು ದೇವಾಲಯಗಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿರುವ ಘಟನೆಗಳು ನಡೆದಿವೆ.