ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಬಯಕೆಗಳು ಭಿನ್ನವಾಗಿರುತ್ತವೆ.ಇದಕ್ಕೆ ಕೆನಡಾದ ವ್ಯಕ್ತಿ ಉತ್ತಮ ನಿದರ್ಶನ. ಇಬ್ಬರು ಮಕ್ಕಳನ್ನು ಪಡೆದ ಮೇಲೆ ಲಿಂಗ ಬದಲಿಸಿಕೊಂಡ ವ್ಯಕ್ತಿ, ಮಕ್ಕಳ ಮುಂದೆ ತಾಯಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ.
ಕೆನಡಾದಲ್ಲಿ ವಾಸಿಸುತ್ತಿರುವ 36 ವರ್ಷದ ಟೀ-ಲಿನ್ ವ್ಯಾನ್ ಡೈಕ್ ಇಬ್ಬರು ಮಕ್ಕಳ ಜನನದ ನಂತರ ತನ್ನ ಲಿಂಗವನ್ನು ಬದಲಾಯಿಸಿಕೊಂಡಿದ್ದಾನೆ. ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯ ಬಟ್ಟೆ ಧರಿಸಲು ಮುಂದಾಗಿದ್ದಾನೆ. 3 ದಿನಗಳವರೆಗೆ ಮಕ್ಕಳಿಗೆ ಇದನ್ನು ಸ್ವೀಕರಿಸಲು ಕಷ್ಟವಾಗಿತ್ತು ಎಂದು ಪತ್ನಿ ಗೇಬ್ರಿಯಲ್ ವ್ಯಾನ್ ಡೈಕ್ ಹೇಳುತ್ತಾಳೆ. 6 ವರ್ಷದ ಪುಟ್ಟ ಹುಡುಗಿ ಎರಡನೇ ತಾಯಿಯನ್ನು ನೋಡಿ ಉತ್ಸುಕಳಾಗಿದ್ದಳಂತೆ. ಇನ್ನೊಬ್ಬಳು ತಂದೆಯನ್ನು ಹುಡುಕುತ್ತಿದ್ದಳು ಎಂದು ವ್ಯಾನ್ ಹೇಳಿದ್ದಾರೆ.
ಗಂಡ ಲಿಂಗ ಬದಲಿಸಿದ ನಂತ್ರವೂ ಜೀವನದಲ್ಲಿ ಯಾವುದೇ ವಿಶೇಷ ಬದಲಾವಣೆಯಾಗಿಲ್ಲವೆಂದು ವ್ಯಾನ್ ಹೇಳಿದ್ದಾಳೆ. ಟೀ ಲಿನ್ ಬಯಕೆ ಕೇಳಿದ ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಲಿಂಗ ಪರಿವರ್ತನೆ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದಳಂತೆ. ಬಟ್ಟೆ, ರೂಪ ಬದಲಾದರೂ ವ್ಯಕ್ತಿ ಬದಲಾಗಿಲ್ಲ ಎನ್ನುತ್ತಾಳೆ ಪತ್ನಿ.