ಒಂದು ವಿಶಿಷ್ಟವಾದ ಕೋನದಿಂದ ತೆಗೆದ ಫೋಟೋ ನೋಡಲು ಬಹಳ ಆಸಕ್ತಿದಾಯಕವಾಗಿ ಕಾಣಬಹುದು. ಇಂತಹ ಒಂದು ಆಸಕ್ತಿದಾಯಕ ಚಿತ್ರವೆಂದರೆ ಸದ್ಯ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕಪ್ಪೆಯ ಚಿತ್ರ. ಆದರೆ, ಅದನ್ನು ಗುರುತಿಸುವುದು ನಿಮಗೆ ತುಸು ಕಷ್ಟವಾಗಬಹುದು..
ಫಿಲಿಪ್ಸ್ ಎಂಬಾಕೆ ಈ ಫೋಟೋ ಕ್ಲಿಕ್ಕಿಸಿದ್ದಾಳೆ. ಸಣ್ಣ ಕಪ್ಪೆಯೊಂದು ಈಕೆಯ ಬಳಿ ಬಂದು ಹಾರಿ ಹೋಗಿದೆ. ಕೂಡಲೇ ತನ್ನ ಮೊಬೈಲ್ ನಲ್ಲಿ ಕಪ್ಪೆಯ ಫೋಟೋ ಕ್ಲಿಕ್ಕಿಸಿದ್ದಾಳೆ. ಆದರೆ, ಫೋಟೋ ನೋಡಿದಾಗ ಈಕೆಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ, ಫೋಟೋದಲ್ಲಿ ಕೇವಲ ಕಲ್ಲುಗಳು, ಎಲೆಗಳು ಮಾತ್ರ ಕಂಡು ಬಂದಿತೇ ವಿನಃ ಕಪ್ಪೆ ಎಲ್ಲಿದೆ ಅನ್ನೋದೇ ಗೊತ್ತಾಗಿಲ್ಲ.
BREAKING NEWS: ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ
ಈ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿದ ಫಿಲಿಪ್ಸ್, ಕಪ್ಪೆ ಎಲ್ಲಿದೆ ಹುಡುಕಬಹುದೇ ಎಂಬ ಶೀರ್ಷಿಕೆ ನೀಡಿದ್ದಾಳೆ. ಫೋಟೋ ನೋಡಿದ ನೆಟ್ಟಿಗರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಕಪ್ಪೆ ಪತ್ತೆಹಚ್ಚಲು ಭೂತ ಕನ್ನಡಿ ಬಳಸಬೇಕಾಗಿತ್ತು, ಆದರೆ ನಾನು ಕಂಡುಕೊಂಡೆ” ಅಂತಾ ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರೆ, ‘ಇದನ್ನು 600% ಜೂಮ್ ಮಾಡಬೇಕಾಗಿತ್ತು’ ಅಂತಾ ಇನ್ನೊಬ್ಬರು ಹೇಳಿದ್ದಾರೆ.
ನೀವು ಇನ್ನೂ ಜೂಮ್ ಮಾಡುತ್ತಾ ಇದ್ದೀರಾ..? ಆದರೂ ಕಪ್ಪೆ ಕಾಣುತ್ತಿಲ್ಲವಾದರೆ ಇಲ್ಲಿದೆ ನೋಡಿ ಉತ್ತರ.