ನಮ್ಮ ದೃಷ್ಟಿಗೆ ಸವಾಲೆಸೆಯುವ ಅನೇಕ ಚಿತ್ರಗಳನ್ನು ನಾವು ದಿನಂಪ್ರತಿ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. ಒಗಟುಗಳು, ಬ್ರೇನ್ ಟೀಸರ್ಗಳು, ಅವಿತುಕೊಂಡಿರುವ ವಸ್ತುಗಳು ಸೇರಿದಂತೆ ಈ ರೀತಿಯ ಅನೇಕ ಚಿತ್ರಗಳು ನಮಗೆ ಇಷ್ಟವಾಗುತ್ತವೆ.
ಟ್ವಿಟರ್ನಲ್ಲಿ ಇಂಥದ್ದೇ ಪೋಸ್ಟ್ ಒಂದರಲ್ಲಿ ಎರಡು ಚಿತ್ರಗಳನ್ನು ಹಾಕಲಾಗಿದ್ದು, ಒಂದೇ ರೀತಿಯ ಎರಡು ಚಿತ್ರಗಳಲ್ಲಿ ಕಂಡು ಬರುವ ವ್ಯತ್ಯಾಸ ಕಂಡು ಹಿಡಿಯಲು ತಿಳಿಸಲಾಗಿದೆ.
’ಈ ಚಿತ್ರಗಳಲ್ಲಿ ಆರು ವಸ್ತುಗಳು ಭಿನ್ನವಾಗಿವೆ,” ಎಂದು ಕ್ಯಾಪ್ಷನ್ ಹಾಕಿರುವ ಈ ಪೋಸ್ಟ್ಗೆ 7.6 ಲಕ್ಷ ಲೈಕ್ಗಳು ಸಿಕ್ಕಿವೆ. ಚಿತ್ರಗಳಲ್ಲಿರುವ ವ್ಯತ್ಯಾಸಗಳನ್ನು ನಿಮಗೇನಾದರೂ ಕಂಡು ಹಿಡಿಯಲಾದೀತೇ?