![](https://kannadadunia.com/wp-content/uploads/2021/12/FGou110XIAAPq97.jpg)
ಹೌದು, ಇದು ಲೀನಾ ನಾಯರ್ ಅವರ ಬಾಲ್ಯದ ಫೋಟೋ. ಮುಂದಿನ ತಿಂಗಳಾಂತ್ಯದಲ್ಲಿ ನ್ಯೂ ಚಾನೆಲ್ ನ ಜಾಗತಿಕ ಸಿಇಒ ಆಗಿ ಭಾರತೀಯ ಮೂಲದ ಲೀನಾ ನಾಯರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಚಾನೆಲ್‌ನಲ್ಲಿ ನಾಯರ್ ಅವರಿಗೆ ಉನ್ನತ ಹುದ್ದೆ ದೊರಕಿರುವ ಬಗ್ಗೆ ಭಾರತೀಯ ಟ್ವಿಟ್ಟರ್ ಭಾವಪರವಶರಾಗಿದೆ. ಯಾಕಂದ್ರೆ ಟ್ವಿಟ್ಟರ್ ನಲ್ಲಿ ಅವರ ಬಾಲ್ಯದ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಬಹುಶಃ ಇದು ನಾಯರ್ ಅವರಿಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿನ ತನ್ನ ಬಾಲ್ಯದ ನೆನಪುಗಳು ಮರುಕಳಿಸಬಹುದು. ಈ ಟ್ವೀಟ್ ಅನ್ನು ಲೀನಾ ನಾಯರ್ ಕೂಡ ಲೈಕ್ ಮಾಡಿದ್ದಾರೆ.
ಅಮೆರಿಕಾದ ಟೆಕ್ಸಾಸ್‌ನ ಡಲ್ಲಾಸ್ ನಲ್ಲಿ ವಾಸವಿರುವ ವಿಜಯಲಕ್ಷ್ಮಿ ನಾಡಾರ್ ಅವರು ಈ ಫೋಟೋವನ್ನು ಟೀಟ್ ಮಾಡಿದ್ದಾರೆ. ಇದರಲ್ಲಿ ಕೊಲ್ಹಾಪುರದ ಹೋಲಿ ಕ್ರಾಸ್ ಕಾನ್ವೆಂಟ್‌ನಲ್ಲಿರುವ ನಾಯರ್ ಅವರ ಶಾಲಾ ದಿನಗಳ ಗ್ರೂಪ್ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಹೋಲಿ ಕ್ರಾಸ್ ಕಾನ್ವೆಂಟ್‌ನ ಶಾಲಾ ಶಿಕ್ಷಕರಾದ ಜೀವ್ ಚಾಹಲ್ ಅವರು ನಾಯರ್ ಅವರ ಈ ಫೋಟೋವನ್ನು, ತರಗತಿಯಲ್ಲೇ ಎತ್ತರದ ಹುಡುಗಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ನಾಡರ್ ಬರೆದಿದ್ದಾರೆ.
ಲೀನಾ ನಾಯರ್ ತನ್ನ ಶಾಲಾ ಶಿಕ್ಷಣವನ್ನು ಕೊಲ್ಹಾಪುರದಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಪದವಿ ಶಿಕ್ಷಣವನ್ನು ಮಹಾರಾಷ್ಟ್ರದ ಸಾಂಗ್ಲಿಯ ವಾಲ್‌ಚಂದ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
ಅವರ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಅವರು, ಕೋಲ್ಕತ್ತಾ, ತಮಿಳುನಾಡಿನ ಅಂಬತ್ತೂರ್ ಮತ್ತು ಮಹಾರಾಷ್ಟ್ರದ ತಲೋಜಾದಲ್ಲಿ ಹಿಂದೂಸ್ತಾನ್ ಯೂನಿಲಿವರ್ ನ (ಹೆಚ್ ಯುಎಲ್) ವಿವಿಧ ಕಾರ್ಖಾನೆಗಳಲ್ಲಿ ಉದ್ಯೋಗದಲ್ಲಿದ್ದರು.
1996 ರಲ್ಲಿ ಲೀನಾ ನಾಯರ್, ಹೆಚ್ ಯುಎಲ್ ನಿಂದ ಉದ್ಯೋಗಿ ಸಂಬಂಧಗಳ ವ್ಯವಸ್ಥಾಪಕರಾಗಿ ನೇಮಕಗೊಂಡರು. 2000ನೇ ಇಸವಿಯಲ್ಲಿ ಹಿಂದೂಸ್ತಾನ್ ಲಿವರ್ ಇಂಡಿಯಾದಲ್ಲಿ ಹೆಚ್ಆರ್ ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದರು.