ಗರ್ಭಿಣಿ ಮಹಿಳೆಯರು ಯಾವಾಗಲೂ ತಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕಾಗಿ ಉತ್ತಮವಾದ ಆಹಾರವನ್ನು ಸೇವಿಸಬೇಕು. ಹಣ್ಣುಗಳು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಗರ್ಭಿಣಿಯರು ಎಲ್ಲಾ ಹಣ್ಣುಗಳನ್ನು ಸೇವಿಸುವಂತಿಲ್ಲ. ಹಾಗಾದ್ರೆ ಪೇರಳೆ ಹಣ್ಣನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ.
ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಹಾಗಾಗಿ ಗರ್ಭಿಣಿಯರು ಪೇರಳೆ ಹಣ್ನನ್ನು ಸೇವಿಸಬಹುದು. ಇದು ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕಾಯಿಲೆ ಬೀಳುವುದನ್ನು ತಪ್ಪಿಸಬಹುದು.
ಪೇರಳೆ ಹಣ್ಣು ಗರ್ಭಾವಸ್ಥೆಯಲ್ಲಿ ಕಾಡುವಂತಹ ಮಧುಮೇಹ ಸಮಸ್ಯೆಯನ್ನು ತಡೆಯುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಪೇರಳೆ ಹಣ್ಣಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಹಾಗಾಗಿ ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಪೇರಳೆ ಹಣ್ಣಿನಲ್ಲಿ ಸಾಕಷ್ಟು ನೀರಿನಾಂಶವಿದೆ. ಹಾಗಾಗಿ ಇದು ನಿರ್ಜಲೀಕರಣ ಸಮಸ್ಯೆಯಿಂದ ಗರ್ಭಿಣಿಯರನ್ನು ಕಾಪಾಡುತ್ತದೆ.
ಇದರಲ್ಲಿ ಕ್ಯಾಲೋರಿ ಸರಿಯಾದ ಪ್ರಮಾಣದಲ್ಲಿರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಿಂದ ಸುಸ್ತು, ಆಯಾಸದ ಸಮಸ್ಯೆ ಕಾಡುವುದಿಲ್ಲ.
ಹಾಗೇ ಇದರಲ್ಲಿ ಸಾಕಷ್ಟು ಕಬ್ಬಿಣಾಂಶವಿದೆ. ಹಾಗಾಗಿ ಇದು ಗರ್ಭಾವಸ್ಥೆಯಲ್ಲಿ ಕಾಡುವಂತಹ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.
ಹಾಗಾಗಿ ಗರ್ಭಿಣಿಯರು ಪೇರಳೆ ಹಣ್ಣನ್ನು ಯಾವುದೇ ಚಿಂತೆಯಿಲ್ಲದೆ ಸೇವಿಸಬಹುದು. ಯಾಕೆಂದರೆ ಇದರಲ್ಲಿ ಗರ್ಭಿಣಿಗೆ ಅನೇಕ ಆರೋಗ್ಯ ಪ್ರಯೋಜನವಿದೆ.