alex Certify ಪ್ರತಿದಿನ ಸೇವಿಸಬಹುದಾ ಕಡಲೆಕಾಯಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಸೇವಿಸಬಹುದಾ ಕಡಲೆಕಾಯಿ…?

ಕಡಲೆಕಾಯಿ ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಇ, ಬಿ1, ಬಿ3, ಬಿ9, ಮೆಗ್ನೀಶಿಯಂ, ರಂಜಕ ಅಧಿಕವಾಗಿರುತ್ತದೆ. ಇದನ್ನು ಪ್ರತಿದಿನ ಸೇವಿಸಬಹುದು. ಆದರೆ ಅತಿಯಾಗಿ ಸೇವಿಸಬೇಡಿ.

*ಕಡಲೆಕಾಯಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದರೆ ಹಸಿವು ಕಡಿಮೆಯಾಗುತ್ತದೆ. ಅದರಿಂದ ತೂಕ ಇಳಿಸಿಕೊಳ್ಳಬಹುದು.

*ಕಡಲೆಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೂ ಹೃದಯದ ರಕ್ತನಾಳಗಳನ್ನು ಸ್ವಚ್ಚವಾಗಿಡುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ಹೃದಯ ಆರೋಗ್ಯವಾಗಿರುತ್ತದೆ.

*ಇದು ಸ್ನಾಯುಗಳ ದುರ್ಬಲತೆಯನ್ನು ನಿವಾರಿಸಿ ಬಲಿಷ್ಠವಾಗಿ ಮಾಡುತ್ತದೆ. ಹಾಗಾಗಿ ಫಿಟ್ ನೆಸ್ ಉತ್ಸಾಹಿಗಳು ಹಾಗೂ ಕ್ರೀಡಾಪಟುಗಳಿಗೆ ಇದು ತುಂಬಾ ಒಳ್ಳೆಯದು.

*ಇದು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...