ಮಹಿಳೆಯರು ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದ ಬಗ್ಗೆ ಎಚ್ಚರ ವಹಿಸಿ.
ಗರ್ಭಾವಸ್ಥೆಯಲ್ಲಿ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಆದರೆ ಲಿಚಿ ಹಣ್ಣನ್ನು ಗರ್ಭಾವಸ್ಥೆಯಲ್ಲಿ ಸೇವಿಸಬಹುದೇ ? ಬೇಡವೇ ? ಎಂಬುದನ್ನು ತಿಳಿಯಿರಿ.
ಲಿಚಿ ಹಣ್ಣು ಕಾರ್ಬೋಹೈಡ್ರೇಟ್ ಗಳು, ಫೈಬರ್, ವಿಟಮಿನ್ ಸಿ, ಫೋಲೇಟ್, ಕೋಲೀನ್, ರಂಜಕ ಮತ್ತು ಪೊಟ್ಯಾಶಿಯಂ ಇತ್ಯಾದಿಗಳನ್ನು ಒಳಗೊಂಡಿದೆ. ಇದು ಮೆದುಳು, ಲಿವರ್ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಇದನ್ನು ಗರ್ಭಿಣಿಯರು ಸೇವಿಸಬಹುದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಆದರೆ ಇದನ್ನು ಅತಿಯಾಗಿ ಸೇವಿಸಬೇಡಿ. ಇದರಿಂದ ದೇಹದಲ್ಲಿ ಊತ ಕಂಡುಬರುತ್ತದೆಯಂತೆ. ಅಲ್ಲದೇ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚು. ಹಾಗಾಗಿ ಇದನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಮಧುಮೇಹ ಸಮಸ್ಯೆ ಕಾಡಬಹುದು.