ಯಾವುದೇ ಸಮಾರಂಭಕ್ಕೆ ಹೋಗ್ಬೇಕು ಅಂದ್ರೆ ನಮಗೆಲ್ಲ ಆಹ್ವಾನ ಸಿಗ್ಬೇಕು. ಅದು ಯಾವುದೇ ರೂಪದಲ್ಲಿ ಆಗಿದ್ರೂ ಸರಿ. ಆದ್ರೆ ಕೆಲವರು ಕರೆಯದೆ ಸಮಾರಂಭಕ್ಕೆ ಹೋಗ್ತಾರೆ. ಅವರಿಗೆ ಅಲ್ಲಿ ನಡೆಯುತ್ತಿರುವ ಸಮಾರಂಭ ಯಾವುದು, ಯಾರದ್ದು ಎಂಬುದೇ ತಿಳಿದಿರೋದಿಲ್ಲ. ಸುಮ್ಮನೆ ಸಮಾರಂಭ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೋಗಿ, ಊಟ ಮಾಡಿ ಬರ್ತಾರೆ. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಿ, ನಾವು ಹುಡುಗಿ ಕಡೆಯಿಂದ ಬಂದವರು, ಹುಡುಗನ ಕಡೆಯಿಂದ ಬಂದವರು ಎನ್ನುವವರಿದ್ದಾರೆ.
ನೀವೂ ಹೀಗೆ ಬಿಟ್ಟಿ ಊಟ ತಿನ್ನಲು ಹೋಗ್ತಿದ್ದರೆ ವಾಟ್ಸ್ ಅಪ್ ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಬಗ್ಗೆ ಸ್ವಲ್ಪ ಗಮನಹರಿಸಿ. ಇನ್ಸ್ಟಾಗ್ರಾಮ್ ನಲ್ಲಿ ವಕೀಲ ಉಜ್ವಲ್ ತ್ಯಾಗಿ ಈ ಬಗ್ಗೆ ಒಂದು ಮಾಹಿತಿ ನೀಡಿದ್ದಾರೆ. ಒಂದ್ವೇಳೆ ಆಹ್ವಾನ ನೀಡದೆ ನೀವು ಮದುವೆ ಸಮಾರಂಭಕ್ಕೆ ಹೋದ್ರೆ ಅದು ಅಪರಾಧ ಎಂದಿದ್ದಾರೆ. ಸೆಕ್ಷನ್ 442 ಮತ್ತು 452 ರ ಅಡಿಯಲ್ಲಿ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಅವರು ಹೇಳಿದ್ದಾರೆ. ಇದನ್ನು ಉಜ್ವಲ್ ತ್ಯಾಗಿ, ಅತಿಕ್ರಮಣದ ಪ್ರಕರಣ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ವೈರಲ್ ಆಗಿದೆ. ಜನರು ಒಂದೊಂದು ರೀತಿ ಕಮೆಂಟ್ ನೀಡ್ತಿದ್ದಾರೆ. ಭಾರತದಲ್ಲಿ ಕರೆಯದೆ ಬಂದ ಅತಿಥಿಗೆ ಅವಮಾನ ಮಾಡೋದಿಲ್ಲ. ಅವರಿಗೂ ಅದ್ಧೂರಿ ಸ್ವಾಗತ ಸಿಗುತ್ತದೆ ಎಂದು ಕೆಲವರು ಹೇಳಿದ್ದಾರೆ.