ಲೈಂಗಿಕತೆಯಲ್ಲಿ ದಂಪತಿಗೆ ಸಂತೋಷ ಸಿಗುವುದರಿಂದ ಅವರು ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಲೈಂಗಿಕತೆ ನಿಮ್ಮ ವೈವಾಹಿಕ ಸಂಬಂಧವನ್ನು ಉತ್ತಮವಾಗಿಡುತ್ತದೆ. ಆದರೆ ಇದರಿಂದ ನೋವಾಗುತ್ತದೆ ಎಂದರೆ ಯಾರು ಲೈಂಗಿಕತೆ ಹೊಂದಲು ಬಯಸುವುದಿಲ್ಲ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಗರ್ಭಾಶಯದ ಫೈಬ್ರಾಯ್ಡ್ ಸಮಸ್ಯೆ ಕಾಡುತ್ತಿದೆ. ಫೈಬ್ರಾಯ್ಡ್ಗಳು ಗರ್ಭಾಶಯದ ಸ್ನಾಯು ಗೋಡೆಯಲ್ಲಿ ಬೆಳೆಯುವ ಗಡ್ಡೆಗಳಾಗಿವೆ. ಆದರೆ ಇದು ಕ್ಯಾನ್ಸರ್ ಅಲ್ಲ. ಫೈಬ್ರಾಯ್ಡ್ಗಳನ್ನು ಹೊಂದಿರುವ ಅನೇಕ ಮಹಿಳೆಯರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ, ಇವು ಹಾರ್ಮೋನ್ ಅಸಮತೋಲನದಿಂದ ಹಾಗೂ ಅನುವಂಶಿಕವಾಗಿ ಉಂಟಾಗುತ್ತದೆ. ಆದರೆ ಈ ಫೈಬ್ರಾಯ್ಡ್ಗಳು ಲೈಂಗಿಕತೆಯ ಸಮಯದಲ್ಲಿ ನೋವನ್ನು ಉಂಟುಮಾಡುತ್ತದೆಯೇ? ಮತ್ತು ಇದು ಮಹಿಳೆಯರ ಲೈಂಗಿಕ ಆಸಕ್ತಿಗಳ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆ ಹಲವು ಮಹಿಳೆಯರಲ್ಲಿ. ಇದಕ್ಕೆ ಉತ್ತರ ಇಲ್ಲಿದೆ.
ಫೈಬ್ರಾಯ್ಡ್ಗಳು ಲೈಂಗಿಕತೆಯ ಸಮಯದಲ್ಲಿ ನೋವನ್ನು ಉಂಟುಮಾಡುತ್ತದೆಯೇ?:
ಅಮೇರಿಕನ್ ಸ್ತ್ರೀರೋಗತಜ್ಞರ ಪ್ರಕಾರ, 4 ರಲ್ಲಿ 3 ಮಹಿಳೆಯರು ಕೆಲವು ಸಮಯದಲ್ಲಿ ಲೈಂಗಿಕತೆಯ ವೇಳೆ ನೋವನ್ನು ಅನುಭವಿಸುತ್ತಾರೆ. ಆದರೆ ಇದು ಹೆಚ್ಚುಕಾಲ ಇರುವುದಿಲ್ಲ. ಆದರೆ ಕೆಲವರು ಲೈಂಗಿಕತೆ ಹೊಂದಿದಾಗಲೆಲ್ಲಾ ನೋವನ್ನು ಅನುಭವಿಸುತ್ತಾರೆ. ಇದಕ್ಕೆ ಅವರ ಗರ್ಭಕೋಶದಲ್ಲಿ ಬೆಳೆಯುತ್ತಿರುವ ಫೈಬ್ರಾಯ್ಡ್ಗಳು ಕೂಡ ಒಂದು ಕಾರಣವಾಗಿರುತ್ತದೆ. ಗರ್ಭಕಂಠದ ಬಳಿ ಅಥವಾ ಇತರ ಸೂಕ್ಷ್ಮ ಪ್ರದೇಶಗಳಲ್ಲಿರುವ ಫೈಬ್ರಾಯ್ಡ್ಗಳು ಆಳವಾಗಿ ನುಗ್ಗುವ ಸಮಯದಲ್ಲಿ ನೋವನ್ನು ಉಂಟುಮಾಡಬಹುದು. ಅಲ್ಲದೆ, ಫೈಬ್ರಾಯ್ಡ್ಗಳು ದೊಡ್ಡದಾಗಿದ್ದರೆ, ಅವು ಪೆಲ್ವಿಕ್ ಅಂಗಗಳ ವಿರುದ್ಧ ಒತ್ತಡ ಹಾಕುತ್ತದೆ ಇದು ಲೈಂಗಿಕತೆಯ ಸಮಯದಲ್ಲಿ ನೋವನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಫೈಬ್ರಾಯ್ಡ್ ಗಳು ಲೈಂಗಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆಯೇ?:
ಫೈಬ್ರಾಯ್ಡ್ಗಳು ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವನ್ನು ಉಂಟುಮಾಡುತ್ತದೆ. ಹಾಗಾಗಿ ಇದು ಮಹಿಳೆಯ ಲೈಂಗಿಕ ಜೀವನದ ಮೇಲೆ ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರಬಹುದು. ನೋವಿಗೆ ಹೆದರಿ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು. ಅಲ್ಲದೇ ಫೈಬ್ರಾಯ್ಡ್ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಲೈಂಗಿಕ ಬಯಕೆ ಕೂಡ ಕಡಿಮೆಯಾಗಬಹುದು. ಫೈಬ್ರಾಯ್ಡ್ಗಳಿಂದ ದೇಹಕ್ಕೆ ಸುಸ್ತು ಮತ್ತು ಆಯಾಸ ಉಂಟಾಗುತ್ತದೆ. ಇದು ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಫೈಬ್ರಾಯ್ಡ್ಗಳಿಂದ ಯೋನಿ ಲೂಬ್ರಿಕೇಷನ್ ಕಡಿಮೆಯಾಗುತ್ತದೆ, ಅದು ಲೈಂಗಿಕ ಕ್ರಿಯೆ ನಡೆಸುವಾಗ ಯೋನಿ ಶುಷ್ಕತೆ ಮತ್ತು ನೋವಿಗೆ ಕಾರಣವಾಗಬಹುದು. ಇದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.