ಸಮುದ್ರದ ಅಲೆಗಳು ಆಳೆತ್ತರಕ್ಕೆ ಜಿಗಿದು ಕಿವಿಗಡಚಿಕ್ಕುವಂತಹ ಶಬ್ದ ಉಂಟು ಮಾಡುವ ದೃಶ್ಯವೇ ಮುದ ನೀಡುವುದು. ರಕ್ಕಸ ಗಾತ್ರದ ಈ ಅಲೆಗಳು ಕೆಲವೊಮ್ಮೆ ಮೈಜುಮ್ಮೆನ್ನಿಸುವಂತೆ ಮಾಡುತ್ತವೆ. ಇನ್ನೂ ಹಲವು ಬಾರಿ ಸುನಾಮಿಯಂತಹ ಭಾರೀ ಪ್ರಮಾಣದ ಅನಾಹುತಗಳಿಗೂ ಕಾರಣವಾಗುತ್ತವೆ.
ಆದರೆ, ಇಲ್ಲೊಂದು ವೀಡಿಯೋದಲ್ಲಿ ಸಮುದ್ರದ ಬೃಹತ್ ಅಲೆಗಳು ಮೋಡವನ್ನು ಸ್ಪರ್ಶಿಸುವಂತೆ ಕಾಣಿಸಿಕೊಂಡಿದ್ದು, ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿವೆ.
ಈ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಮೋಡಗಳನ್ನು ಮುಟ್ಟುವಷ್ಟು ಎತ್ತರಕ್ಕೆ ಅಲೆಗಳು ಚಿಮ್ಮುವ ದೃಶ್ಯವಿದೆ. ಸಮುದ್ರದಲ್ಲಿ ನಿಧಾನಗತಿಯಲ್ಲಿ ಮೂಡುವ ಬೃಹತ್ ಗಾತ್ರದ ಅಲೆಯು ತನ್ನ ತುತ್ತ ತುದಿಯನ್ನು ತಲುಪುವ ಹಂತದಲ್ಲಿ ಮೋಡವನ್ನು ಸೇರಿಕೊಳ್ಳುವ ಮನಮೋಹಕ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಬರೋಬ್ಬರಿ 15 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದ್ದು, ಅಲೆಗಳು ಇಷ್ಟೊಂದು ಎತ್ತರಕ್ಕೆ ಚಿಮ್ಮುತ್ತವೆಯೇ ಎಂಬ ಸೋಜಿಗದ ಪ್ರಶ್ನೆಯನ್ನು ನೆಟ್ಟಿಗರಲ್ಲಿ ಹುಟ್ಟಿಸಿದೆ.
ಕ್ಯಾಶ್ ಕಾಂಡಿಡೇಟ್ ಗೆ ಮಂತ್ರಿ ಸ್ಥಾನ: ನಿರಾಣಿಗೆ ಯತ್ನಾಳ್ ಟಾಂಗ್
ಆದರೆ, ಈ ವೀಡಿಯೋವನ್ನು ಎಷ್ಟು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ ಮತ್ತು ಅಲೆಗಳೂ ಎಷ್ಟು ಎತ್ತರಕ್ಕೆ ಏರಿವೆ ಎಂದರೆ, ಯಾರನ್ನಾದರೂ ಸುಲಭವಾಗಿ ಮೋಸಗೊಳಿಸಬಹುದು. ಮೋಡಗಳನ್ನು ಮುಟ್ಟುತ್ತಿರುವಂತೆ ಭಾಸವಾಗುತ್ತಿರುವ ಅಲೆಗಳು ನಿಜವಾಗಿಯೂ ಹಾಗೆ ಮಾಡುತ್ತಿಲ್ಲ. ಇದನ್ನು ವೈಜ್ಞಾನಿಕ ನಿದರ್ಶನವೊಂದರ ಮೂಲಕ ವಿವರಿಸಬಹುದು.
ಈ ವೈರಲ್ ಕ್ಲಿಪ್‌ನಲ್ಲಿ ಕಾಣುತ್ತಿರುವ ಮೋಡಗಳು ನಿಜವಾಗಿ ಸಮುದ್ರದ ತುಂತುರುಗಳಿಂದ ನಿರ್ಮಾಣವಾಗಿರುವ ಗಾಳಿಗುಳ್ಳೆ ((SSA)) ಗಳಾಗಿವೆ. ಇವುಗಳು ಬರಿಗಣ್ಣಿಗೆ ಮೋಡಗಳಂತೆಯೇ ಕಾಣಿಸುತ್ತವೆ. ಸಾಗರದ ಅಲೆಗಳು ಎಂದಿಗೂ ಮೋಡವನ್ನು ಮುಟ್ಟುವಷ್ಟು ಎತ್ತರ ಇರುವುದಿಲ್ಲ. ಚಂಡಮಾರುತದಂತಹ ಸಂದರ್ಭದಲ್ಲಿ ಮಾತ್ರ ಅಲೆಗಳ ಎತ್ತರ ಸಾಮಾನ್ಯಕ್ಕಿಂತ ಜಾಸ್ತಿ ಇರುತ್ತದೆ. 1958ರಲ್ಲಿ ಲಿಟುಯಾ ಕೊಲ್ಲಿಯಲ್ಲಿ 1700- ಅಡಿ ಎತ್ತರದ ಅಲೆ ನಿರ್ಮಾಣವಾಗಿದ್ದು ಇದುವರೆಗಿನ ದಾಖಲೆಯಾಗಿದೆ. ಆದರೆ, ಮೋಡ ಇದಕ್ಕಿಂತಲೂ ಸಾಕಷ್ಟು ಎತ್ತರದಲ್ಲಿರುತ್ತದೆ.
https://twitter.com/buitengebieden/status/1521600107032027137?ref_src=twsrc%5Etfw%7Ctwcamp%5Etweetembed%7Ctwterm%5E1521600107032027137%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fcan-sea-waves-really-touch-the-clouds-truth-behind-viral-video-5114455.html