ನೆಲಗಡಲೆಯನ್ನು ಅಡುಗೆಗೆಗಳಲ್ಲಿ ಬಳಸುತ್ತಾರೆ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಆದರೆ ಈ ನೆಲಗಡಲೆಯನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ ಎಂದು ನಮ್ಮಲ್ಲಿ ಅನೇಕರು ಹೇಳುತ್ತಾರೆ. ಹಾಗಾಗಿ ನೆಲಗಡಲೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆಯೇ? ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ.
ಯೋಗ ತರಬೇತುದಾರರೊಬ್ಬರು, ನೆಲಗಡಲೆ ಪೌಷ್ಟಿಕಾಂಶದ ನಿಧಿಯಾಗಿದೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ, ಅವು ನಮ್ಮ ತೂಕವನ್ನು ನಿರ್ವಹಿಸುವಲ್ಲಿ ಪ್ರಯೋಜನಕಾರಿಯಾಗಿವೆ ಎಂದು ತಿಳಿಸಿದ್ದಾರೆ. ಹಾಗಾಗಿ ತೂಕ ಇಳಿಸಲು ಸಮತೋಲಿತ ಆಹಾರದ ಭಾಗವಾಗಿ ಇದನ್ನು ಸೇವಿಸಿದಾಗ ತೂಕ ನಷ್ಟ ಸಾಧ್ಯ ಎನ್ನಲಾಗಿದೆ.
ನೆಲಗಡಲೆ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ಕಾರಣ ಇದು ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೇ ನೆಲಗಡಲೆ ಉತ್ತಮ ಕೊಬ್ಬನ್ನು ಹೊಂದಿರುತ್ತದೆ, ಇದು ಹೊಟ್ಟೆ ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಹಾಗೇ ಅತಿಯಾಗಿ ತಿನ್ನುವ ಬಯಕೆಗಳನ್ನು ಕಡಿಮೆ ಮಾಡುತ್ತದೆ.
ಹಾಗಾಗಿ ನೆಲಗಡಲೆಯಿಂದ ನಿಮ್ಮ ತೂಕ ಇಳಿಕೆಗೆ ಅನುಕೂಲವಾಗಲು ಸಕ್ಕರೆ ಮತ್ತು ಉಪ್ಪು ಮಿಶ್ರಿತ ನೆಲಗಡಲೆಗಳ ಬದಲು ಉಪ್ಪುರಹಿತ ಮತ್ತು ಸಕ್ಕರೆರಹಿತ ನೆಲಗಡಲೆಯನ್ನು ಆರಿಸಿ, ಹಾಗೇ ನೀವು ನೆಲಗಡಲೆಯನ್ನು ಬೇಯಿಸಿ ತಿನ್ನಬಹುದು ಅಥವಾ ನೆಲಗಡಲೆಯನ್ನು ಪೋಹಾ, ಉಪ್ಮಾ, ಚಟ್ನಿಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರಗಳಲ್ಲಿ ಸೇರಿಸಿಕೊಳ್ಳಬಹುದು.