ಆಧುನಿಕ ಯುಗದಲ್ಲಿ ಜನ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯದಿಂದ ಇರಬೇಕೆಂದು ಬಯಸುತ್ತಾರೆ. ಇಂತಹ ಪ್ರಯತ್ನದಲ್ಲಿ ತುಪ್ಪ ಸೇವನೆ ಕೊಬ್ಬು ಕರಗಿಸುತ್ತದೆಂಬ ನಂಬಿಕೆಯಿಂದ ಹೆಚ್ಚು ತುಪ್ಪ ಸೇವಿಸುತ್ತಾರೆ. ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ತುಪ್ಪ, ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹಲವು ವರ್ಷಗಳಿಂದ ಕೇಳಲಾಗಿದೆ. ಆದರೆ ಇದು ನಿಜವಲ್ಲ.
ಇದು ತಪ್ಪು ನಂಬಿಕೆಯಾಗಿದ್ದು ತುಪ್ಪ ನಿಮ್ಮ ತೂಕವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಪೌಷ್ಟಿಕತಜ್ಞೆ ಅಮಿತಾ ಗಾದ್ರೆ ವಿವರಿಸಿದ್ದಾರೆ.
ಶಿಕ್ಷಣತಜ್ಞ ಪ್ರಶಾಂತ್ ದೇಸಾಯಿ ಅವರ ವೈರಲ್ ವೀಡಿಯೊವನ್ನು ಉದ್ದೇಶಿಸಿ, ಪೌಷ್ಟಿಕತಜ್ಞೆ ಅಮಿತಾ ಗಾದ್ರೆ ಕೊಬ್ಬು ಕರಗಿಸುವಲ್ಲಿ ತುಪ್ಪ ನಿಜವಾಗಿಯೂ ಸಹಾಯ ಮಾಡುತ್ತದೆ ಎಂಬ ನಂಬಿಕೆಯು ತಪ್ಪು ತಿಳುವಳಿಕೆಯಾಗಿದೆ ಎಂದು ವಿವರಿಸಿದರು. ಗಾದ್ರೆ ಪ್ರಕಾರ ವಾಸ್ತವವಾಗಿ ತುಪ್ಪ ಕ್ಯಾಲೋರಿ-ದಟ್ಟವಾಗಿರುತ್ತದೆ. ಪ್ರತಿ ಗ್ರಾಂಗೆ ಒಂಬತ್ತು ಕ್ಯಾಲೋರಿ ಇರುತ್ತದೆ. ಇದೊಂದು ಆಹಾರವಾಗಿದ್ದು ಹೆಚ್ಚಾಗಿ ಸ್ಯಾಚುರೇಟೆಡ್ ಕೊಬ್ಬು. ಪ್ರತಿದಿನ ದೇಹಕ್ಕೆ ಸುಮಾರು 25 ರಿಂದ 30 ಗ್ರಾಂಗಳು ಕೊಬ್ಬಿನಾಂಶ ಅವಶ್ಯಕವಿದ್ದು ಹೀಗಾಗಿ ನೀವು ದಿನಕ್ಕೆ ಒಂದರಿಂದ ಒಂದೂವರೆ ಟೀ ಚಮಚ ತುಪ್ಪವನ್ನು ಮಾತ್ರ ಸೇವಿಸಬೇಕು ಎಂದಿದ್ದಾರೆ.
ಇದಲ್ಲದೆ ಪೌಷ್ಟಿಕತಜ್ಞೆ ಗಾದ್ರೆ ಅವರು ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾ ಬೆಚ್ಚಗಿನ ನೀರಿನೊಂದಿಗೆ ತುಪ್ಪವು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಆದರೆ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುವುದಿಲ್ಲ ಎಂದು ಹೇಳಿದರು.
ತುಪ್ಪವು ತೂಕ ನಿರ್ವಹಣೆ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಸಂಯೋಜಿತ ಲಿನೋಲಿಕ್ ಆಮ್ಲ ಅಥವಾ CLA ಅನ್ನು ಕೇವಲ ಸಾಧಾರಣ ಪ್ರಮಾಣ (0.5 ರಿಂದ 1.5%)ದಲ್ಲಿ ಹೊಂದಿರುತ್ತದೆ. ಇದು CLA ಅನ್ನು ಹೊಂದಿರದ ಕಾರಣ, ತುಪ್ಪದ ಅತಿಯಾದ ಸೇವನೆಯು ಕೊಬ್ಬಿನ ಮೇಲೆ ಮೇಲೆ ಪರಿಣಾಮ ಬೀರಬಹುದು.ತುಪ್ಪವು ಪ್ರಯೋಜನಗಳನ್ನು ಹೊಂದಿದೆ ಆದರೆ ಆರೋಗ್ಯದ ಅಪಾಯಗಳನ್ನು ತಪ್ಪಿಸಲು ದಿನಕ್ಕೆ ಒಂದರಿಂದ ಎರಡು ಟೀ ಚಮಚದಷ್ಟು ಸೇವನೆ ಮೀರಬಾರದು ಎಂದಿದ್ದಾರೆ.