ಡಬಲ್ ಮಾಸ್ಕ್ ಧರಿಸಿದರೆ ನಿಮ್ಮನ್ನು ಕೋವಿಡ್-19 ನಿಂದ ರಕ್ಷಿಸಿಕೊಳ್ಳಬಹುದೇ? ಇಂತಹದ್ದೊಂದು ಪ್ರಶ್ನೆ ಕಳೆದ ಎರಡು ವರ್ಷಗಳಿಂದ ಸಾಮಾನ್ಯ ನಾಗರಿಕರಲ್ಲಿ ಮೂಡುತ್ತಿದೆ. ಇದಕ್ಕೆ ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.
ಅಮೇರಿಕಾದ ವಿಜ್ಞಾನಿಗಳು ಈ ಡಬಲ್ ಮಾಸ್ಕ್ ನಿಂದ ಆಗಬಹುದಾದ ಅನುಕೂಲಗಳೇನು? ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿಯನ್ನು ನೀಡಿದ್ದಾರೆ. ಅವರ ಪ್ರಕಾರ, ಡಬಲ್ ಮಾಸ್ಕ್ ಧರಿಸುವುದರಿಂದ ಕೋವಿಡ್-19 ನಿಂದ ರಕ್ಷಣೆ ದೊರೆಯುವುದಿಲ್ಲ. ಆದರೆ, ಸೋಂಕು ಹರಡುವ ಪ್ರಮಾಣ ಕಡಿಮೆ ಇರುತ್ತದೆ.
ಈ ಅಧ್ಯಯನದ ವರದಿಯನ್ನು ಫಿಸಿಕ್ಸ್ ಆಫ್ ಫ್ಲುಯಿಡ್ಸ್ ಪ್ರಕಟಿಸಿದ್ದು, ಅದರ ಪ್ರಕಾರ, ಅಸಮರ್ಪಕವಾದ ಡಬಲ್ ಮಾಸ್ಕ್ ಧರಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಹೆಚ್ಚು ಪದರಗಳಿರುವ ಮಾಸ್ಕ್ ಎಂದರೆ ಕಡಿಮೆ ರಂಧ್ರಗಳಿರುವ ಕವಚವಾಗಿರುತ್ತದೆ. ಆದರೆ, ಇದರಿಂದ ಹೆಚ್ಚು ಗಾಳಿಯಾಡದೇ, ಬಲವಂತವಾಗಿ ಮಾಸ್ಕ್ ನ ಬದಿಗಳು, ಮೇಲ್ಭಾಗ ಮತ್ತು ಕೆಳಭಾಗದಿಂದ ಹೋಗುವ ಗಾಳಿಯ ಜೊತೆಗೆ ವೈರಸ್ ಮೂಗು ಮತ್ತು ಬಾಯಿಯನ್ನು ಸೇರಿಕೊಳ್ಳುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ ಮತ್ತು ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
BIG BREAKING: ಒಂದೇ ದಿನದಲ್ಲಿ 3,545 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢ; 19,688 ಸಕ್ರಿಯ ಪ್ರಕರಣ ದಾಖಲು
ಕೇವಲ ಉತ್ತಮ ಗುಣಮಟ್ಟದ ಡಬಲ್ ಮಾಸ್ಕ್ ಗಳು ಗಾಳಿಯ ಫಿಲ್ಟರ್ ಸಮರ್ಥತೆಯನ್ನು ಹೆಚ್ಚು ಮಾಡುತ್ತವೆ. ಆದರೆ, ಉಸಿರಾಟದ ತೊಂದರೆಗೂ ಕಾರಣವಾಗಲಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ ಬಟ್ಟೆಯಿಂದ ತಯಾರಿಸಲಾದ ಮಾಸ್ಕ್ ಗಳು ಕೋವಿಡ್ ನಿಂದ ಸ್ವಲ್ಪ ಮಟ್ಟಿಗಿನ ರಕ್ಷಣೆ ನೀಡುತ್ತವೆ. ಆದರೆ, ಎನ್ 95 ಮತ್ತು ಕೆಎನ್95 ಮಾಸ್ಕ್ ಗಳು ಹೆಚ್ಚು ರಕ್ಷಣೆ ನೀಡುತ್ತವೆ.