ಒಮಿಕ್ರಾನ್ ತಳಿಯ ಕೊರೋನಾ ವೈರಸ್ ಎಲ್ಲೆಡೆ ಭೀತಿ ಮೂಡಿಸಿದ ಬೆನ್ನಿಗೇ, ಇದೀಗ ಮತ್ತೊಂದು ಸಾಧ್ಯತೆಯ ಆತಂಕ ಆರೋಗ್ಯ ತಜ್ಞರನ್ನು ಕಾಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಒಮಿಕ್ರಾನ್ ಅಮೆರಿಕದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅದಾಗಲೇ ಹಾವಳಿ ಎಬ್ಬಿಸಿದ್ದ ಡೆಲ್ಟಾವತಾರಿ ಕೋವಿಡ್ ಹಾಗೂ ಒಮಿಕ್ರಾನ್‌ಗಳ ಸ್ಟ್ರೇನ್‌ಗಳು ಕೂಡಿಕೊಂಡು ಹೊಸದೊಂದು ಸೂಪರ್ ವೈರಾಣು ಸೃಷ್ಟಿಯಾಗಬಲ್ಲದೇ ಎಂಬ ಪ್ರಶ್ನೆಗಳು ಇದೀಗ ದೊಡ್ಡದಾಗಿ ಎದ್ದಿವೆ. ಮೊಡೆರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪೌಲ್ ಬರ್ಟನ್ ಪ್ರಕಾರ ಇದು ಸಾಧ್ಯ.
ಬ್ರಿಟನ್ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯೆದುರು ಹಾಜರಾದ ಬರ್ಟನ್, ಯಾರಿಗಾದರೂ ಒಮಿಕ್ರಾನ್ ಮತ್ತು ಡೆಲ್ಟಾಗಳು ಒಮ್ಮೆಗೆ ಅಟಕಾಯಿಸಿಕೊಂಡರೆ ಹೊಸ ಸ್ಟ್ರೇನ್ ಉತ್ಪತ್ತಿಯಾಗಬಹುದು ಎಂದಿದ್ದಾರೆ.
BIG NEWS: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಪುಂಡರನ್ನು ಸದೆಬಡಿಯಲಾಗುವುದು; ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ
“ಖಂಡಿತವಾಗಿಯೂ ಮಾಹಿತಿ ಇದೆ, ರೋಗನಿರೋಧಕ ಶಕ್ತಿ ರಾಜಿಯಾಗಿರುವ ಮಂದಿಯಲ್ಲಿ ಎರಡೂ ಬಗೆಯ ವೈರಾಣುಗಳು ಕಾಣುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಕೆಲ ಪತ್ರಿಕೆಗಳು ತಿಳಿಸುತ್ತಿವೆ,” ಎಂದು ಡಾ. ಬರ್ಟನ್ ಹೇಳಿದ್ದಾಗಿ ಡೈಲಿ ಮೇಲ್ ತಿಳಿಸಿದೆ.
ಎರಡೂ ವೈರಾಣುಗಳು ತಮ್ಮಲ್ಲಿರುವ ಸ್ಟ್ರೇನ್‌ಗಳನ್ನು ಅದಲುಬದಲು ಮಾಡಿಕೊಂಡು ಇನ್ನಷ್ಟು ಅಪಾಯಕಾರಿ ವೈರಾಣು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಬರ್ಟನ್‌ನ ಸಂಸದರಿಗೆ ತಿಳಿಸಿದ್ದಾರೆ. ಹೀಗೆ ಆಗುವ ಸಾಧ್ಯತೆ ತೀರಾ ವಿರಳವಾಗಿದ್ದರೂ, ಒಂದೊಮ್ಮೆ ಹಾಗೇನಾದರೂ ಆಗಿಬಿಟ್ಟರೆ ನಿಯಂತ್ರಣ ಮೀರಿದ ಘಟನಾವಳಿಗಳು ಆಗಿಬಿಡಲಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಬ್ರಿಟನ್‌ನಲ್ಲಿ ಒಮಿಕ್ರಾನ್ ಮತ್ತು ಡೆಲ್ಟಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಡುವೆ ಈ ಸಾಧ್ಯತೆ ದಟ್ಟೈಸುತ್ತಿದೆ ಎನ್ನುತ್ತಾರೆ ಬರ್ಟನ್. ಬ್ರಿಟನ್‌ನಲ್ಲಿ ಶುಕ್ರವಾರದಂದು ಹೊಸ ಅವತಾರಿ ಕೋವಿಡ್‌ನ 3,201 ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲಿ ಒಮಿಕ್ರಾನ್ ಪತ್ತೆಯಾದಾಗಿನಿಂದ ದಾಖಲಾದ ಅತಿ ದೊಡ್ಡ ಸಂಖ್ಯೆಯಾಗಿದೆ.