ಬಿಟ್ ಕಾಯಿನ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿಯಾಗಿದೆ. ಇದನ್ನು 2009 ರಲ್ಲಿ ಸಟೋಶಿ ನಕಾಮೊಟೊ ಎಂಬ ಗುಪ್ತ ಹೆಸರಿನಲ್ಲಿ ರಚಿಸಲಾಯಿತು.
ಬಿಟ್‌ಕಾಯಿನ್, ಕ್ರಿಪ್ಟೋಕರೆನ್ಸಿಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಆದ್ರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬಿಟ್ ಕಾಯಿನನ್ನು ಕರೆನ್ಸಿಯಾಗಿ ಬಳಸಬಹುದು ಎಂದು ಅನೇಕರು ಪ್ರಶ್ನೆ ಕೇಳ್ತಾರೆ.
ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಅಪರಾಧವಲ್ಲ. ಕ್ರಿಪ್ಟೋಕರೆನ್ಸಿ ಬಗ್ಗೆ ಅನೇಕ ಭಾರತೀಯರಿಗೆ ತಿಳಿದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಸಂಸ್ಥೆಗಳು ಕ್ರಿಪ್ಟೋಕರೆನ್ಸಿ ಸ್ವೀಕಾರಕ್ಕೆ ಮುಂದಾಗ್ತಿವೆ. ಭಾರತದ ಅನೇಕ ವಾಣಿಜ್ಯ ಉದ್ಯಮ ಸಂಸ್ಥೆಗಳು ಬಿಟ್ ಕಾಯಿನ್ ಮತ್ತು ಎಥೆರಿಯಂ ಸ್ವೀಕರಿಸಲು ಆರಂಭಿಸಿವೆ. ದೆಹಲಿ ಮೂಲದ, ಗೃಹಾಲಂಕಾರದ ವ್ಯಾಪಾರ ಉದ್ಯಮ ರಗ್ ರಿಪಬ್ಲಿಕ್, ಬಿಟ್ ಕಾಯಿನ್ ಪಾವತಿ ಸ್ವೀಕರಿಸುತ್ತದೆ. ಬೆಂಗಳೂರು ಮೂಲದ ಪರ್ಸ್ ಮತ್ತು ಸೂರ್ಯವಂಶಿ ರೆಸ್ಟೋರೆಂಟ್ ಹೆಸರಿನ ಡಿಜಿಟಲ್ ವ್ಯಾಪಾರ ಉದ್ಯಮದಲ್ಲಿ ವಿದೇಶಿ ಹಣವಾಗಿಯೂ ಇದನ್ನು ಬಳಸಬಹುದು.
ಅಮೆರಿಕಾದ ಅತಿದೊಡ್ಡ ರೆಸ್ಟೋರೆಂಟ್ ಗಳಲ್ಲಿ ಒಂದಾದ ಕ್ವಿಜ್ನೋಸ್, ಬಿಟ್ ಕಾಯಿನನ್ನು, ಸ್ವೀಕರಿಸಲು ಶುರು ಮಾಡಿದೆ. ಗ್ರಾಹಕರು ದಿ ಕ್ವಿಜ್ನೋಸ್ ರೆಸ್ಟೋರೆಂಟ್ ನಲ್ಲಿ ಬಿಟ್ ಕಾಯಿನ್ ಪಾವತಿಸಬಹುದು. ಯುಎಸ್ ಮೂಲದ ವ್ಯಾಪಾರ ಕಂಪನಿ, ಎಎಮ್‌ಸಿ ಎಂಟರ್‌ಟೈನ್‌ಮೆಂಟ್, ವರ್ಷದ ಅಂತ್ಯದ ವೇಳೆಗೆ ಬಿಟ್‌ಕಾಯಿನ್ ಸ್ವೀಕರಿಸುವುದಾಗಿ ಘೋಷಣೆ ಮಾಡಿದೆ.