alex Certify ಕೊರೋನಾ ಲಸಿಕೆ ಬರುವ ಮೊದಲೇ ಸಿಹಿ ಸುದ್ದಿ: ಕೋವಿಡ್ ತಡೆಗೆ ಬಿಸಿಜಿ ಲಸಿಕೆಯೂ ಪರಿಣಾಮಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಲಸಿಕೆ ಬರುವ ಮೊದಲೇ ಸಿಹಿ ಸುದ್ದಿ: ಕೋವಿಡ್ ತಡೆಗೆ ಬಿಸಿಜಿ ಲಸಿಕೆಯೂ ಪರಿಣಾಮಕಾರಿ

ನವದೆಹಲಿ: ಕೊರೋನಾ ತಡೆಗೆ ಬಿಸಿಜಿ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಲಸಿಕೆ ಪಡೆದುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿಗಳ ಪೈಕಿ ಒಬ್ಬರಿಗೂ ಸೋಂಕು ತಗುಲದಿರುವುದು ತಿಳಿದುಬಂದಿದೆ.

ಕ್ಷಯರೋಗದಿಂದ ಮಕ್ಕಳನ್ನು ರಕ್ಷಿಸಲು ಬಿಸಿಜಿ ಲಸಿಕೆ ನೀಡಲಾಗುತ್ತದೆ. ಈ ಲಸಿಕೆ ಜನರನ್ನು ಕೊರೋನಾದಿಂದಲೂ ರಕ್ಷಿಸುತ್ತದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ನೋಯ್ಡಾ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಸಿಬ್ಬಂದಿಗೆ ಕಳೆದ ಏಪ್ರಿಲ್ ನಲ್ಲಿ ಬಿಸಿಜಿ ಲಸಿಕೆ ನೀಡಲಾಗಿದೆ. ಈ 30 ಮಂದಿಯಲ್ಲಿ ಒಬ್ಬರಿಗೂ ಕೂಡ ಕೊರೋನಾ ಸೋಂಕು ಕಾಣಿಸಿಕೊಂಡಿಲ್ಲ.

80 ಮಂದಿ ಸಿಬ್ಬಂದಿಯಲ್ಲಿ ಲಸಿಕೆ ಪಡೆಯದೆ ಕಾರ್ಯನಿರ್ವಹಿಸಿದ 50 ಜನರಲ್ಲಿ 8 ಮಂದಿಗೆ ಸೋಂಕು ತಗಲಿರುವ ವರದಿ ಬಂದಿದೆ. ಆಗಸ್ಟ್ ನಲ್ಲಿ ಎರಡನೇ ಹಂತದಲ್ಲಿ 130 ಜನರ ತಂಡವನ್ನು ರಚಿಸಿ ಅವರಲ್ಲಿ 50 ಮಂದಿಗೆ ಲಸಿಕೆ ನೀಡಲಾಗಿದ್ದು ಲಸಿಕೆ ಪಡೆದುಕೊಂಡ ಎಲ್ಲಾ 50 ಜನರಿಗೆ ಕೊರೊನಾ ಸೋಂಕು ತಗುಲಿಲ್ಲ ಎನ್ನುವುದು ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...