ಪೂಜೆಯಲ್ಲಿ ಬಳಸುವ ಕರ್ಪೂರದಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಶತಮಾನಗಳಿಂದಲೂ ಕರ್ಪೂರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೂ ಇದನ್ನು ಪೂಜೆಗೆ ಮಾತ್ರ ಬಳಸುವವರೇ ಹೆಚ್ಚು. ಕರ್ಪೂರವು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಬಲ್ಲದು. ಅಷ್ಟೇ ಅಲ್ಲ ಕರ್ಪೂರದ ಪರಿಮಳವು ದೆವ್ವ ಮತ್ತು ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂಬ ನಂಬಿಕೆಯೂ ಇದೆ.
ಪ್ರತಿದಿನ ಕರ್ಪೂರದ ಪರಿಮಳ ತೆಗೆದುಕೊಳ್ಳುವುದರಿಂದ ಒತ್ತಡ ಮತ್ತು ಆತಂಕವನ್ನು ನಿವಾರಣೆಯಾಗುತ್ತದೆ. ಶೀತ ಮತ್ತು ಕೆಮ್ಮಿನಿಂದ ಪರಿಹಾರ ಪಡೆಯಲು ಬಯಸಿದರೆ ನಿಯಮಿತವಾಗಿ ಕರ್ಪೂರದ ಪರಿಮಳ ತೆಗೆದುಕೊಳ್ಳಿ. ಕರ್ಪೂರದ ಪರಿಣಾಮವು ಮೈಗ್ರೇನ್‌ನಂತಹ ತಲೆನೋವನ್ನೂ ನಿವಾರಿಸುತ್ತದೆ. ಕರ್ಪೂರ ಆಯಾಸವನ್ನು ಕಡಿಮೆ ಮಾಡಿ ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳಿದ್ದರೆ ಕರ್ಪೂರದ ಪರಿಮಳ ತೆಗೆದುಕೊಳ್ಳಬೇಕು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕರ್ಪೂರದಲ್ಲಿ ಎಂಟಿಬ್ಯಾಕ್ಟೀರಿಯಲ್ ಮತ್ತು ಎಂಟಿಫಂಗಲ್ ಗುಣಲಕ್ಷಣಗಳಿದ್ದು, ಇದು ಅಪಾಯಕಾರಿ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
ಕರವಸ್ತ್ರದಲ್ಲಿ ಕರ್ಪೂರವನ್ನೇಕೆ ಕಟ್ಟಿಟ್ಟುಕೊಳ್ಳಬೇಕು?
ಶೀತ ಮತ್ತು ಮೂಗು ಕಟ್ಟಿದಂತಾಗುತ್ತಿದ್ದರೆ ಕರವಸ್ತ್ರದಲ್ಲಿ ಕರ್ಪೂರ ಇಟ್ಟುಕೊಂಡು ಆಗಾಗ ಅದರ ಪರಿಮಳ ತೆಗೆದುಕೊಳ್ಳಬೇಕು. ಮೈಗ್ರೇನ್ ರೋಗಿಗಳು ಕೂಡ ಕರ್ಪೂರವನ್ನು ಜೊತೆಗಿಟ್ಟುಕೊಳ್ಳಬಹುದು. ಬೇಗನೆ ಸುಸ್ತಾದಂತೆ ಆಗುತ್ತಿದ್ದರೆ ಕರ್ಪೂರದ ಪರಿಮಳ ತೆಗೆದುಕೊಳ್ಳಬೇಕು. ಆದರೆ ಕರ್ಪೂರವನ್ನು ಬಳಸುವ ಮೊದಲು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕರ್ಪೂರವನ್ನು ನೇರವಾಗಿ ಮೂಗಿನಲ್ಲಿ ಇಡಬೇಡಿ. ಕೆಲವರಿಗೆ ಕರ್ಪೂರದಿಂದ ಅಲರ್ಜಿ ಉಂಟಾಗಬಹುದು, ಆದ್ದರಿಂದ ಇದನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.