alex Certify ಯುವತಿಗೆ ಬಿಗ್ ಶಾಕ್: ಗೊತ್ತೇ ಆಗದಂತೆ ಮೊಬೈಲ್ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಯ್ತು ನಗ್ನ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಗೆ ಬಿಗ್ ಶಾಕ್: ಗೊತ್ತೇ ಆಗದಂತೆ ಮೊಬೈಲ್ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಯ್ತು ನಗ್ನ ದೃಶ್ಯ

ಬೆಂಗಳೂರು: ಮೊಬೈಲ್ ಚಾರ್ಜರ್ ಮಾದರಿಯ ಚಾರ್ಜರ್ ಮೂಲಕ ಯುವತಿಯ ನಗ್ನ ಚಿತ್ರ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಟಿ. ನರಸೀಪುರದ ಬಿ. ಮಹೇಶ್(30) ಬಂಧಿತ ಆರೋಪಿಯಾಗಿದ್ದಾನೆ. ಇಂಜಿನಿಯರಿಂಗ್ ಪದವೀಧರನಾದ ಮಹೇಶ್ ಮೈಸೂರಿನಲ್ಲಿ ತಂದೆಯ ವ್ಯವಹಾರ ನೋಡಿಕೊಂಡಿದ್ದು, ಯುವತಿ ಮತ್ತು ಆಕೆಯ ಕುಟುಂಬದವರು ಪರಿಚಯವಾಗಿದ್ದರು. ಹೀಗಾಗಿ ಬೆಂಗಳೂರಿಗೆ ಬಂದಾಗ ಯುವತಿಯ ಮನೆಗೆ ಬಂದು ಹೋಗುತ್ತಿದ್ದ ಆರೋಪಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಸಂಚು ರೂಪಿಸಿದ್ದ.

ಇದಕ್ಕಾಗಿ ಆನ್ಲೈನ್ ನಲ್ಲಿ ಮೊಬೈಲ್ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾ ಖರೀದಿಸಿದ್ದು, ಯುವತಿಯ ಖಾಸಗಿ ರೂಮ್ ನಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿ ಒಂದೆರಡು ಗಂಟೆ ಹೊರಗೆ ಹೋಗಿ ಬಂದಿದ್ದ. ನಂತರ ಚಾರ್ಜ್ ಗೆ ಹಾಕಿದ್ದ ಮೊಬೈಲ್ ಹಾಗೂ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದ. ಬಳಿಕ instagram ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ. ಯುವತಿ ಆ ಖಾತೆಯನ್ನು ಬ್ಲಾಕ್ ಮಾಡಿದಾಗ ಬೇರೆ ಖಾತೆ ತೆರೆದು ಮೆಸೇಜ್ ಕಳುಹಿಸಿದ್ದ. ಸಲಗೆಯಿಂದ ಇರದಿದ್ದರೆ ನಗ್ನ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಯುವತಿ ನಿರ್ಲಕ್ಷಿಸಿದಾಗ ಒಂದು ನಗ್ನ ವಿಡಿಯೋ ಅಪ್ಲೋಡ್ ಮಾಡಿ ಇದು ಸ್ಯಾಂಪಲ್ ಅಷ್ಟೇ ಎಂದು ಹೇಳಿದ್ದ.

ತನ್ನ ನಗ್ನ ವಿಡಿಯೋ ನೋಡಿ ಆಘಾತಕ್ಕೆ ಒಳಗಾದ ಯುವತಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸೈಬರ್ ಕ್ರೈಂ ಪೊಲೀಸ್ ಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ರಹಸ್ಯ ಕ್ಯಾಮೆರಾ, ಲ್ಯಾಪ್ಟಾಪ್, ಮೆಮೊರಿ ಕಾರ್ಡ್, ಪೆನ್ ಡ್ರೈವ್, ಎರಡು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...