ವಿಶ್ವದಾದ್ಯಂತ ಅನೇಕ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದು ಪದ್ಧತಿಗಳು ಅಚ್ಚರಿ ಹುಟ್ಟಿಸುತ್ತವೆ. ಕಾಂಬೋಡಿಯಾದಲ್ಲಿ ವಿಚಿತ್ರ ಪದ್ಧತಿಯೊಂದು ಜಾರಿಯಲ್ಲಿದೆ. ಹೆಣ್ಣು ಮಕ್ಕಳಿಗೆ ಇಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದ್ದು, ಪತಿ ಆಯ್ಕೆಗೆ ಸಂಪೂರ್ಣ ಅಧಿಕಾರವಿದೆ.
ಕಾಂಬೋಡಿಯಾದ ಕೆರುಂಗ್ ಸಮುದಾಯದಲ್ಲಿ ಹುಡುಗಿಯರು ಋತುಮತಿಗಳಾಗ್ತಿದ್ದಂತೆ ಅವರಿಗೆ ಬೇರೆ ಮನೆ ನೀಡಲಾಗುತ್ತದೆ. ತಂದೆ, ಮಗಳಿಗಾಗಿ ಮನೆ ನಿರ್ಮಾಣ ಮಾಡ್ತಾನೆ. ಆ ಮನೆಯಲ್ಲಿ ಅವರು ಪುರುಷರ ಜೊತೆ ಸಂಬಂಧ ಬೆಳೆಸಬಹುದು. 13 ವರ್ಷದಿಂದಲೇ ಹುಡುಗಿಯರಿಗೆ ಸಂಬಂಧ ಬೆಳೆಸಲು ಅವಕಾಶವಿದೆ.
ಹುಡುಗಿರು ತಮಗಿಷ್ಟವಾಗುವ ಹುಡುಗನನ್ನು ಮದುವೆಯಾಗಬಹುದು. ಹುಡುಗ ಇಷ್ಟವಾಗುವವರೆಗೆ ಅವರು ಬೇರೆ ಬೇರೆ ಹುಡುಗರ ಜೊತೆ ಸಂಬಂಧ ಬೆಳೆಸಬಹುದು. ಈ ಸಮುದಾಯದ ಹುಡುಗಿಯರು ಧೈರ್ಯವಂತೆಯರು. ಅವರು ತಮ್ಮ ಪದ್ಧತಿ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ ಎಂದು ವರದಿಯೊಂದು ಹೇಳಿದೆ.
ಇಲ್ಲಿನ ಹುಡುಗಿಯರಿಗೆ ಪತಿ ಆಯ್ಕೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರ ಆಯ್ಕೆಯನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಈ ಬಗ್ಗೆ ಸಮುದಾಯದಲ್ಲಿ ಯಾವುದೇ ಗಲಾಟೆಯಾಗುವುದಿಲ್ಲ. ಈಗಾಗಲೇ ಸಂಬಂಧ ಬೆಳೆಸಿದ ಹುಡುಗರು ಈ ಬಗ್ಗೆ ವಿರೋಧ ವ್ಯಕ್ತಪಡಿಸುವುದಿಲ್ಲ.