ಇಂದೋರ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪತ್ನಿಯೊಬ್ಬಳು ಹತ್ಯೆ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆ ಪ್ರೇಮಿಯನ್ನು ಬಂಧಿಸಲಾಗಿದೆ.’
ಮೃತ ಆಕಾಶ್ ಮಿಡ್ಕಿಯಾ, ಇಂದೋರ್‌ನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ಅವರ ಪತ್ನಿ ವರ್ತಿಕಾ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಮನೀಶ್ ವರ್ಮಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಆಕಾಶ್ ಗೆ, ವರ್ತಿಕಾ ಮತ್ತು ಮನೀಶ್ ಅಕ್ರಮ ಸಂಬಂಧ ಗೊತ್ತಾಗ್ತಿದ್ದಂತೆ ಆತ ಕೋಪಗೊಂಡಿದ್ದ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಬುದ್ದಿ ಕಲಿಸಲು ವರ್ತಿಕಾ ಮುಂದಾದಳು.
BIG NEWS: ಸಿ.ಎಂ. ಇಬ್ರಾಹಿಂ ಭೇಟಿಯಾದ HDK; ಜೆಡಿಎಸ್ ಸೇರ್ಪಡೆ ಬಹುತೇಕ ಖಚಿತ
ಆಕಾಶ್ ಮುಖಕ್ಕೆ ಮೆಣಸಿನ ಪುಡಿ ಎರಚಲಾಗಿತ್ತು. ನಂತ್ರ ಚಾಕುವಿನಿಂದ ಆಕಾಶ್ ಹತ್ಯೆ ಮಾಡಲಾಗಿತ್ತು. ಅಕ್ಟೋಬರ್ 13ರಂದು ಘಟನೆ ನಡೆದಿತ್ತು. 150ಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳು ಗಡ್ಡ, ತಲೆ ಬೋಳಿಸಿಕೊಂಡಿದ್ದರಂತೆ. ವರ್ತಿಕಾ ಹಾಗೂ ಆಕೆ ಪ್ರೇಮಿ ಜೊತೆ ಮತ್ತೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.