ಶಿವಮೊಗ್ಗ: ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಪೊಲೀಸರಿಗೆ ತುರ್ತು ಕರೆ ಮಾಡಲು ಇಡೀ ದೇಶಕ್ಕೆ ಒಂದೇ ಸಂಖ್ಯೆ ನಿಗದಿ ಮಾಡಲು ಚರ್ಚೆ ನಡೆದಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ನೆರವಿಗೆ ಪೊಲೀಸರಿಗೆ ಕರೆ ಮಾಡಲು ಇಡೀ ದೇಶಕ್ಕೆ ಒಂದೇ ಸಂಖ್ಯೆಯನ್ನು ನಿಗದಿ ಮಾಡಲಿದ್ದು, ಕರೆ ಬಂದ ಐದು ನಿಮಿಷದೊಳಗೆ ನಿಗದಿತ ಸ್ಥಳಕ್ಕೆ ತಲುಪಲಾಗುತ್ತದೆ. ಇದಕ್ಕೆ ಅಗತ್ಯವಿರುವ ವಾಹನ, ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.
ಐದು ವರ್ಷ ಸೇವೆ ಸಲ್ಲಿಸಿದ ಎಎಸ್ಐ ಗಳಿಗೆ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ನೀಡುವ ಸೇವಾವಧಿ ಮೂರು ವರ್ಷಕ್ಕೆ ಮಿತಿಗೊಳಿಸಬೇಕು ಎಂಬ ಬೇಡಿಕೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಅನೇಕ ವರ್ಷಗಳಿಂದ ಒಂದೇ ಕಡೆ ಇರುವವರನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ಪೊಲೀಸರಿಗೆ ಉತ್ತಮವಾದ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ಗಣೇಶೋತ್ಸವ ಅದ್ದೂರಿ ಆಚರಣೆಗಿಂತ ಈಗಿನ ಪರಿಸ್ಥಿತಿಯಲ್ಲಿ ಜನರ ಜೀವ ಮುಖ್ಯವಾಗಿದೆ. ಹಾಗಾಗಿ ನಿರ್ಬಂಧ ಹೇರುವುದು ಅನಿವಾರ್ಯವೆಂದು ತಿಳಿಸಿದ್ದಾರೆ.