ಹುಬ್ಬಳ್ಳಿ: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಭಾರಿ ಚರ್ಚೆಯಲ್ಲಿರುವಾಗಲೇ ಇದೀಗ ನೆಕ್ಸ್ ಕಾಯಿನ್ ಟ್ರೇಡಿಂಗ್ ಹೆಸರಲ್ಲಿ ಭಾರಿ ವಂಚನೆ ಎಸಗಿರುವ ಪ್ರಕರಣ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ನೆಕ್ಸ್ ಕಾಯಿನ್ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಹಣದ ಆಮಿಷವೊಡ್ದಿ ವಂಚಕರ ಗುಂಪು ಜನರನ್ನು ದೋಖಾ ಮಾಡುತ್ತಿರುವ ಸಂಗತಿ ಬಯಲಾಗಿದೆ. ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಪ್ರಕಾಶ್ ಎಂಬುವವರಿಗೆ 8.13 ಲಕ್ಷ ರೂಪಾಯಿಯನ್ನು ಟ್ರೇಡಿಂಗ್ ಹೆಸರಲ್ಲಿ ವಂಚಿಸಿದ್ದಾರೆ.
ಸಂಸದರ ನಿಧಿ ಪುನಾರಂಭಿಸಿದ ಕೇಂದ್ರ ಸರ್ಕಾರ: ಪ್ರತಿ ಸಂಸದರ ಕ್ಷೇತ್ರಾಭಿವೃದ್ಧಿಗೆ ಸಿಗಲಿದೆ ಇಷ್ಟು ಮೊತ್ತ
ವಾಟ್ಸಪ್ ಗ್ರೂಪ್ ಮೂಲಕ ಪರಿಚಯ ಮಾಡಿಕೊಂಡು ನಂತರ ತಮ್ಮ ವೆಬ್ ಸೈಟ್ ನ ಲಿಂಕ್ ವೊಂದನ್ನು ಕಳುಹಿಸಿದ ವಂಚಕರು ಇದರಲ್ಲಿ ಹೂಡಿಕೆ ಮಾಡಿ ಹಣ ಗಳಿಸಿ ಎಂದು ಆಮಿಷವೊಡ್ದಿದ್ದಾರೆ. ಇದನ್ನು ನಂಬಿ ಪ್ರಕಾಶ್ ಎಂಬುವವರು ಹಂತ ಹಂತವಾಗಿ 8.13 ಲಕ್ಷ ರೂಪಾಯಿಯನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಇದೀಗ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.