alex Certify ಅದೃಷ್ಟ ಅಂದ್ರೆ ಇದೇ ಅಲ್ವಾ….? ತಪ್ಪು ಬಟನ್ ಒತ್ತಿದರೂ ಅರಸಿ ಬಂತು 75 ಕೋಟಿ ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದೇ ಅಲ್ವಾ….? ತಪ್ಪು ಬಟನ್ ಒತ್ತಿದರೂ ಅರಸಿ ಬಂತು 75 ಕೋಟಿ ರೂಪಾಯಿ

ಲಾಟರಿ ಮಷೀನ್‌‌ನಲ್ಲಿ ಆಕಸ್ಮಿಕವಾಗಿ ತಪ್ಪು ಬಟನ್ ಒತ್ತಿದ ನಂತರವೂ ಕ್ಯಾಲಿಫೋರ್ನಿಯಾ ಮಹಿಳೆ 75 ಕೋಟಿ ರೂ. ಗೆದ್ದಿದ್ದಾರೆ ಅದೃಷ್ಟ ಹೇಗೇಗೋ ಒಲಿದು ಬರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಕ್ಯಾಲಿಫೋರ್ನಿಯಾ ಸ್ಟೇಟ್ ಲಾಟರಿ ಪತ್ರಿಕಾ ಪ್ರಕಟಣೆಯ ಪ್ರಕಾರ, ನವೆಂಬರ್ 2021 ರಲ್ಲಿ ಟಾರ್ಜಾನಾದ ವಾನ್ಸ್ ಸೂಪರ್ ಮಾರ್ಕೆಟ್‌ನಲ್ಲಿ ಲಾಟರಿ ಸ್ಕ್ರ್ಯಾಚರ್ಸ್ ವಿತರಣಾ ಮಷೀನ್‌ಗೆ ಲಾಕ್ವೆಡ್ರಾ ಎಡ್ವರ್ಡ್ಸ್ ಎಂಬುವರು $40 ಅನ್ನು ಹಾಕಿದ್ದರು.

ಯಂತ್ರದಿಂದ $30 200X ಸ್ಕ್ರ್ಯಾಚರ್ಸ್ ಟಿಕೆಟ್ ಬಂದಿತ್ತು. ಅದನ್ನು ಎಡ್ವರ್ಡ್ಸ್ ಖರೀದಿಸುವ ಉದ್ದೇಶವಿರಲಿಲ್ಲ. ತನ್ನ ಹಣದ 75ರಷ್ಟನ್ನು ಒಂದು ಟಿಕೆಟ್‌ನಲ್ಲಿ ಖರ್ಚು ಮಾಡುವ ಬಗ್ಗೆ ಆಕೆ ಸಿಟ್ಟಿಗೆದ್ದಿದ್ದಳು.

ಶಾಪ್‌ನಿಂದ ಹೊರಟು ತನ್ನ ಕಾರಿಗೆ ಮರಳಿದ ನಂತರ, ಎಡ್ವರ್ಡ್ಸ್ ತನ್ನ ಟಿಕೆಟ್ ಅನ್ನು ಸ್ಕ್ರಾಚ್ ಮಾಡಲು ಪ್ರಾರಂಭಿಸಿದ್ದು, $10 ಮಿಲಿಯನ್‌ನ ಬಹುಮಾನ ಗೆದ್ದಿದ್ದಳು.

ನಾನು ಮೊದಲಿಗೆ ಅದನ್ನು ನಿಜವಾಗಿಯೂ ನಂಬಲಿಲ್ಲ ಎಂದಿರುವ ಆಕೆ ತನ್ನ ಗೆಲುವಿನ‌ ಹಣದಲ್ಲಿ ಮನೆ ಖರೀದಿಸಲು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆ ಪ್ರಾರಂಭಿಸಲು ಬಳಸಲು ಯೋಜಿಸಿದ್ದಾಳೆ. ಅವಳು ವಿಜೇತ ಟಿಕೆಟ್ ಖರೀದಿಸಿದ ಅಂಗಡಿಗೆ $50,000 ಬೋನಸ್ ಸಿಕ್ಕಿತು.

ಫೆಬ್ರವರಿಯಲ್ಲಿ ನ್ಯೂಯಾರ್ಕ್ ವ್ಯಕ್ತಿಯೊಬ್ಬರು ನ್ಯೂಯಾರ್ಕ್ ಲಾಟರಿ ಟಿಕೆಟ್‌ನಿಂದ $10 ಮಿಲಿಯನ್‌ನ ಬಹುಮಾನವನ್ನು ಗೆದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...