ನಭೋಮಂಡಲವೇ ಕೌತುಕ ಮತ್ತು ಅಚ್ಚರಿಯ ಆಗರ. ಕ್ಯಾಲಿಫೋರ್ನಿಯಾದಲ್ಲಿ ಆಕಾಶದಲ್ಲಿ ಕಂಡುಬಂದ ಕೌತುಕವೊಂದು ಅಚ್ಚರಿ ಮೂಡಿಸಿದ್ದು ಕುತೂಹಲ ಹೆಚ್ಚಿಸಿದೆ. ಶುಕ್ರವಾರ ರಾತ್ರಿ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಪ್ರದೇಶದಲ್ಲಿ ಆಕಾಶದಲ್ಲಿ ನಿಗೂಢ ಬೆಳಕಿನ ಗೆರೆಗಳು ಕಾಣಿಸಿಕೊಂಡವು.
ಆಶ್ಚರ್ಯಕರ ದೃಶ್ಯದ ವೀಡಿಯೊಗಳನ್ನು ಕ್ಯಾಲಿಫೋರ್ನಿಯಾ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ.
ಸೇಂಟ್ ಪ್ಯಾಟ್ರಿಕ್ಸ್ ಡೇ ಆಚರಣೆಗಾಗಿ ಸ್ಯಾಕ್ರಮೆಂಟೊದಲ್ಲಿನ ಕಿಂಗ್ ಕಾಂಗ್ ಬ್ರೂಯಿಂಗ್ ಕಂಪನಿಯಲ್ಲಿದ್ದ ಜೈಮ್ ಹೆರ್ನಾಂಡೆಜ್ ಅವರು 40 ಸೆಕೆಂಡುಗಳ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಸಂಭ್ರಮಾಚರಣೆಯ ಗುಂಪಿನಲ್ಲಿದ್ದವರೊಬ್ಬರು ಆಗಸದಲ್ಲಿ ಬೆಳಕಿನ ದೀಪಗಳನ್ನು ಗಮನಿಸಿದಾಗ ಜೈಮ್ ಹೆರ್ನಾಂಡೆಜ್ ಅವರು ಅದನ್ನು ಚಿತ್ರೀಕರಿಸಲು ಪ್ರಾರಂಭಿಸಿದರು.
ನಾವು ಅದನ್ನು ನೋಡಿದಾಗ ನಿಜಕ್ಕೂ ಆಘಾತಕ್ಕೊಳಗಾಗಿದ್ದೆವು. ಅದನ್ನು ನೋಡಿ ನಾವು ಆಶ್ಚರ್ಯಪಟ್ಟಿದ್ದೇವೆ. ಇದುವರೆಗೂ ನಮ್ಮಲ್ಲಿ ಯಾರೂ ಅಂತಹದನ್ನು ನೋಡಿರಲಿಲ್ಲ ಎಂದು ಎಂದು ಹೆರ್ನಾಂಡೆಜ್ ಅಸೋಸಿಯೇಟೆಡ್ ಪ್ರೆಸ್ ಗೆ ಹೇಳಿದ್ದಾರೆ.
ಬ್ರೂವರಿ ಮಾಲೀಕರು ಹೆರ್ನಾಂಡೆಜ್ ಅವರ ವೀಡಿಯೊವನ್ನು ಇನ್ ಸ್ಟಾಗ್ರಾಂಗೆ ಪೋಸ್ಟ್ ಮಾಡಿ, ಯಾರಾದರೂ ಈ ಬೆಳಕಿನ ರಹಸ್ಯವನ್ನು ಪರಿಹರಿಸಬಹುದೇ ಎಂದು ಕೇಳಿದ್ದಾರೆ.
ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್ ನ ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್ಡೊವೆಲ್ ಅವರು 99.9 ಪ್ರತಿಶತದಷ್ಟು ಬೆಳಕಿನ ಗೆರೆಗಳು ಬಾಹ್ಯಾಕಾಶ ಅವಶೇಷಗಳನ್ನು ಸುಡುವುದರಿಂದ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
https://youtu.be/3_pyodnU3B8