ಒಡಿಶಾದ ನಬರಂಗ್‌ಪುರದಲ್ಲಿ ನವರಾತ್ರಿಯಂದೇ ಜನಿಸಿದ ಹಸುವಿನ ಕರುವೊಂದು ಎರಡು ತಲೆಗಳು ಹಾಗೂ ಮೂರು ಕಣ್ಣುಗಳೊಂದಿಗೆ ಹುಟ್ಟಿದ್ದು, ಸ್ಥಳೀಯರು ಈ ಕರುವನ್ನು ದುರ್ಗಾ ಮಾತೆಯ ಅವತಾರದಂತೆ ಪೂಜಿಸುತ್ತಿದ್ದಾರೆ.
ಚಿಕ್ಕಮಗುವಿಗೆ ಕೊಡಲೇಬೇಡಿ ಈ ʼಆಹಾರʼ
ಇಲ್ಲಿನ ಕುಮುಲು ಪಂಚಾಯಿತಿಯ ಬಿಜಾಪುರ ಗ್ರಾಮದ ರೈತ ಧನಿರಾಂ ಎಂಬವರಿಗೆ ಸೇರಿದ ಹಸುವಿಗೆ ಜನಿಸಿದ ಈ ಕರುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದು ಈ ಗೋವು ಇತ್ತೀಚೆಗೆ ತಾನೇ ಗರ್ಭಧಾರಣೆ ಮಾಡಿತ್ತು. ಪ್ರಸವದ ವೇಳೆ ಹೆರಿಗೆಯಾಗಲು ಕಷ್ಟಪಡುತ್ತಿದ್ದ ಹಸುವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಧನಿರಾಂಗೆ, ಎರಡು ತಲೆಗಳು ಹಾಗೂ ಮೂರು ಕಣ್ಣುಗಳ ಕರು ಜನಿಸುವುದು ತಿಳಿದು ಬಂದಿದೆ.
ನಾಯಿಯ ಮುಗ್ಧತೆಯ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ
ತಾಯಿಯ ಕೆಚ್ಚಲಿನಿಂದ ಹಾಲು ಕುಡಿಯಲು ಕರು ಕಷ್ಟ ಪಡುತ್ತಿರುವ ಕಾರಣ ಅದಕ್ಕೆ ಹೊರಗಿನಿಂದ ಹಾಲು ತಂದು ಉಣಿಸಲಾಗುತ್ತಿದೆ.
ನವರಾತ್ರಿಯಂದೇ ಜನಿಸಿದ ಈ ಕರುವನ್ನು, ದಕ್ಷಿಣ ದಿಕ್ಕಿನಲ್ಲಿ ಮುಖ ಮಾಡಿ ನಿಲ್ಲಿಸಿ, ಸಾಕ್ಷಾತ್ ದುರ್ಗಾ ಮಾತೆಯ ರೂಪದಲ್ಲಿ ಸ್ಥಳೀಯರು ಪೂಜಿಸುತ್ತಿದ್ದಾರೆ.