
ಧಣಿರಾಮ ಎಂಬವರಿಗೆ ಸೇರಿದ ಕರು ಇದಾಗಿದ್ದು ಈ ವಿಚಿತ್ರ ಕರುವನ್ನು ನೋಡಿ ಇಡಿ ಕುಟುಂಬವೇ ಆಶ್ಚರ್ಯ ವ್ಯಕ್ತಪಡಿಸಿದೆ. 2 ವರ್ಷಗಳ ಹಿಂದೆ ಹಸುವನ್ನು ಧಣಿರಾಮ ಖರೀದಿ ಮಾಡಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಹಸುವು ಗರ್ಭಿಣಿಯಾಗಿತ್ತು.
ಹೆರಿಗೆ ಸಮಯದಲ್ಲಿ ಹಸುವು ತುಂಬಾನೇ ನೋವನ್ನು ಅನುಭವಿಸಿತ್ತು ಎಂದು ಧಣಿರಾಮ ಹೇಳಿದ್ದಾರೆ. ಹೆರಿಗೆಯಾದ ಬಳಿಕ ನೋಡಿದ್ರೆ ಹಸುವು ಈ ವಿಚಿತ್ರ ಕರುವಿಗೆ ಜನ್ಮ ನೀಡಿತ್ತು ಎಂದು ವಿವರಿಸಿದ್ದಾರೆ.
ಈ ವಿಚಿತ್ರ ದೇಹದ ಆಕಾರದಿಂದಾಗಿ ಕರುವಿಗೆ ಹಾಲನ್ನು ಸರಿಯಾಗಿ ಕುಡಿಯಲು ಆಗುತ್ತಿಲ್ಲ. ಹೀಗಾಗಿ ಹಾಲನ್ನು ಬೇರೆಡೆ ಖರೀದಿ ಮಾಡಿ ಕರುವಿಗೆ ಕುಡಿಸುತ್ತಿದ್ದೇವೆ ಎಂದು ಧಣಿರಾಮ ಹೇಳಿದ್ದಾರೆ.
ನವರಾತ್ರಿ ಸಮಯದಲ್ಲಿ ಈ ಕರು ಜನಿಸಿದ ಹಿನ್ನೆಲೆಯಲ್ಲಿ ಗ್ರಾಮದ ಜನತೆ ಇದನ್ನು ದುರ್ಗಾ ಮಾತೆ ಎಂದೇ ಪರಿಗಣಿಸಿದ್ದಾರೆ. ಹೀಗಾಗಿ ಧಣಿರಾಮ್ ಮನೆಗೆ ಬರುವ ಗ್ರಾಮಸ್ಥರು ಕರುವಿಗೆ ಪೂಜೆ ಸಲ್ಲಿಸುತ್ತಿದ್ದಾರೆ.