ಕೊಲ್ಕತ್ತಾ: ಪ್ರಮುಖ ತೀರ್ಪಿನಲ್ಲಿ ಕಲ್ಕತ್ತಾ ಹೈಕೋರ್ಟ್ ಬುಧವಾರ 2010 ರಿಂದ ಪಶ್ಚಿಮ ಬಂಗಾಳದಲ್ಲಿ ನೀಡಲಾದ ಎಲ್ಲಾ ಇತರ ಹಿಂದುಳಿದ ವರ್ಗಗಳ(ಒಬಿಸಿ) ಪ್ರಮಾಣಪತ್ರಗಳನ್ನು ವಜಾಗೊಳಿಸಿದೆ.
ಒಬಿಸಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತಪಬ್ರತ ಚಕ್ರಬಿರ್ತಿ ಮತ್ತು ರಾಜಶೇಖರ್ ಮಂಥ ಅವರ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗವು 1993 ರ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯ ಆಧಾರದ ಮೇಲೆ OBC ಗಳ ಹೊಸ ಪಟ್ಟಿಯನ್ನು ತಯಾರಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ.
ಹೈಕೋರ್ಟ್ ಪೀಠವು 2010 ರ ನಂತರ ಸಿದ್ಧಪಡಿಸಲಾದ ಒಬಿಸಿ ಪಟ್ಟಿಯನ್ನು ‘ಅಕ್ರಮ’ ಎಂದು ಬಣ್ಣಿಸಿದೆ.
ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳು (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ) (ಸೇವೆಗಳು ಮತ್ತು ಹುದ್ದೆಗಳಲ್ಲಿ ಖಾಲಿ ಹುದ್ದೆಗಳ ಮೀಸಲಾತಿ) ಕಾಯಿದೆ, 2012 ಸೆಕ್ಷನ್ 2H, 5, 6 ಮತ್ತು ಸೆಕ್ಷನ್ 16 ಮತ್ತು ಶೆಡ್ಯೂಲ್ I ಮತ್ತು III ಅನ್ನು ‘ಅಸಂವಿಧಾನಿಕ’ ಎಂದು ಹೈಕೋರ್ಟ್ ತಳ್ಳಿಹಾಕಿದೆ.