ಇಂಜಿನಿಯರಿಂಗ್ ಪದವಿ ಪೂರೈಸಿರುವ ಉಕ್ಕಿನ ನಗರಿ ವಿಶಾಖಪಟ್ಟಣಂನ ಇಬ್ಬರು ಸಹೋದರಿಯರು ಈಗ ಕೇಕ್ ತಯಾರಿಸುವುದರಲ್ಲಿ ಸುಪ್ರಸಿದ್ಧರಾಗಿದ್ದಾರೆ.
ತಮ್ಮ ಅಮ್ಮ ಅವರ ಜೀವನದುದ್ದಕ್ಕೂ ರುಚಿಕರವಾದ ಕೇಕುಗಳನ್ನು ತಯಾರಿಸುವುದನ್ನು ನೋಡಿದ ಬೆಳೆದ ಈ ಹುಡುಗಿಯರೂ, ’ನೂಲಿನಂತೆ ಸೀರೆ, ಅಮ್ಮನಂತೆ ಮಗಳೂ’ ಎಂಬಂತೆ ತಾವೂ ಕೂಡಾ ಕೇಕ್ ತಯಾರಿಸಲು ಮುಂದಾಗಿದ್ದಾರೆ. ವಿಶಾಖನಗರಿಯ ಜನರು ಇಬ್ಬರನ್ನೂ ಪ್ರೀತಿಯಿಂದ ‘ಕೇಕ್ ಸಿಸ್ಟರ್ಸ್’ ಎಂದು ಕರೆಯುತ್ತಾರೆ.
ಪತಿ ಬಿಟ್ಟು ಪ್ರಿಯಕರನ ಜೊತೆಗಿದ್ದ ಮಹಿಳೆ ಸಾವು, ವಿಷ ಸೇವಿಸಿದ ಪ್ರಿಯಕರನ ವಿರುದ್ಧ ಪೋಷಕರ ಗಂಭೀರ ಆರೋಪ
ಇಬ್ಬರೂ ಸೇರಿಕೊಂಡು ‘ಪಿ & ಪಿ ಪೇಸ್ಟ್ರೀಸ್’ ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದ ಚಾನೆಲ್‌ಗಳು, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಬಳಸಿಕೊಂಡು ಸಹೋದರಿಯರು ಆರ್ಡರ್‌ಗಳನ್ನು ಸ್ವೀಕರಿಸುತ್ತಾರೆ.
ರಮ್ಯಾ ಮತ್ತು ಜನಾರ್ದನ ರಾವ್ ಅವರ ಪುತ್ರಿಯರಾದ ಪ್ರಿಯಾ ಮತ್ತು ಪ್ರೀತಿ ಎಂಜಿನಿಯರಿಂಗ್ ಪದವೀಧರೆಯರು. ಪ್ರೀತಿ ಎಂ.ಟೆಕ್ ಪೂರೈಸಿದ್ದರೆ, ಆಕೆಯ ತಂಗಿ ಪ್ರಿಯಾ ಬಿ.ಟೆಕ್ ಪದವಿ ಪಡೆದಿದ್ದಾರೆ. ತಮ್ಮ ‘ಪಿ & ಪಿ ಪೇಸ್ಟ್ರೀಸ್’ ಮೂಲಕ ಈ ಇಬ್ಬರೂ ಸಹೋದರಿಯರು ಸಖತ್ ಆರ್ಡರ್‌ಗಳನ್ನು ಪಡೆಯುತ್ತಾರೆ. ದೈಹಿಕವಾಗಿ ಅಂಗಡಿಯನ್ನು ತೆರೆಯದೆಯೇ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಈ ಜಾಣೆಯರು.
ವಾಸ್ತವಿಕ ವಿಚಾರಗಳ ಥೀಂನಲ್ಲಿ ನವೀನ ಶೈಲಿಯಲ್ಲಿ ಕೇಕ್ ರಚಿಸುವ ಮೂಲಕ ಈ ಸಹೋದರಿಯರು ಬೇಕಿಂಗ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.