ಸುರಿಯುವ ಮಳೆಯಲ್ಲಿ ಸಿಲುಕಿಕೊಂಡ ಗಾಲಿ ಕುರ್ಚಿಯಲ್ಲಿದ್ದ ವ್ಯಕ್ತಿಗೆ ಕೆಫೆಯೊಂದರ ಕಾರ್ಮಿಕ ನೆರವಾದ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದೆ.
ಐರ್ಲೆಂಡ್‌ನಲ್ಲಿ ನಡೆದ ಘಟನೆ ಇದು. ಸಪ್ಲೇಯರ್ ಆಗಿರುವ ಫ್ರಾಂಕಿ ಎಂಬಾತ ತನ್ನ ಕರ್ತವ್ಯದ ಕರೆಯನ್ನು ಮೀರಿ ಗಾಲಿ ಖುರ್ಚಿಯಲ್ಲಿದ್ದ ಮಳೆಯಲ್ಲಿ ಸಿಲುಕಿಕೊಂಡಿದ್ದ ಗ್ರಾಹಕನಿಗೆ ಛತ್ರಿ ಹಿಡಿದು ರಕ್ಷಿಸಿ ಮನೆಗೆ ತಲುಪಲು ಸಹಾಯ ಮಾಡಿರುವ ಮಾನವೀಯ ಪ್ರಸಂಗ ನೆಟ್ಟಿಗರ ಹೃದಯ ತಟ್ಟಿದೆ.
ಕಳೆದ ವರ್ಷದಂತೆ ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಕಡಿತ ಮಾಡಲು ಸಿಎಂಗೆ ಪೋಷಕರ ಮನವಿ
ಟ್ವಿಟ್ಟರ್ ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿರುವ ಮಾಜಿ ವೃತ್ತಿಪರ ಅಮೇರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್, ತನ್ನ ಫಾಲೋಯರ್ ಗಳನ್ನು ಬಾರ್‌ಮ್ಯಾನ್ ಫ್ರಾಂಕಿ ಅವರಂತೆ ಇರಬೇಕೆಂದು ಕೇಳಿಕೊಂಡಿದ್ದಾರೆ.
ಫ್ರಾಂಕಿ ಡಬ್ಲಿನ್‌ನ ದಿ ಪೈನ್ಸ್ ಕೆಫೆ ಬಾರ್‌ನಲ್ಲಿ ಕೆಲಸ ಮಾಡುತ್ತಾರೆ. ಅವರ ಅಭಿಮಾನಪೂರ್ವಕ ಕಾರ್ಯನಿರ್ವಹಣೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಈವರೆಗೆ ವೀಡಿಯೊವನ್ನು 5.34 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಫ್ರಾಂಕಿಗೆ ಸಾಕಷ್ಟು ಪ್ರಶಂಸೆ ಸಿಕ್ಕಿದೆ.