alex Certify Watch Video | ಪ್ರತಿದಿನದ ಗ್ರಾಹಕನಿಗೆ ಹೋಟೆಲ್ ಗೌರವ; ಖಾದ್ಯಕ್ಕೆ ಹೆಸರಿಟ್ಟು ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಪ್ರತಿದಿನದ ಗ್ರಾಹಕನಿಗೆ ಹೋಟೆಲ್ ಗೌರವ; ಖಾದ್ಯಕ್ಕೆ ಹೆಸರಿಟ್ಟು ಸಂಭ್ರಮ

ಪ್ರತಿದಿನ ಉಪಹಾರ ಗೃಹದಲ್ಲಿ ತಮ್ಮ ನೆಚ್ಚಿನ ಒಂದೇ ರೀತಿಯ ತಿಂಡಿ ತೆಗೆದುಕೊಳ್ತಿದ್ದ ಗ್ರಾಹಕನಿಗೆ ಹೋಟೆಲ್, ಗ್ರಾಹಕನ ಹೆಸರನ್ನೇ ಆ ಖಾದ್ಯಕ್ಕಿಟ್ಟು ಗೌರವ ಸೂಚಿಸಿದೆ. ಇಂತಹ ಘಟನೆ ಐರ್ಲೆಂಡ್ ನಲ್ಲಿ ನಡೆದಿದೆ.

ಜಾನ್ ಎಂಬ ವೃದ್ಧರು ಕಳೆದ ಹಲವು ವರ್ಷಗಳಿಂದ ಐರ್ಲೆಂಡ್‌ನ ಸ್ಥಳೀಯ ಉಪಾಹಾರ ಗೃಹದಲ್ಲಿ ಪ್ರತಿದಿನ ಫ್ರೈ-ಅಪ್ ಉಪಹಾರವನ್ನು ಆರ್ಡರ್ ಮಾಡಿ ಸೇವಿಸುತ್ತಿದ್ದರು. ತಮ್ಮ ಪ್ರತಿದಿನದ ಗ್ರಾಹಕ ಜಾನ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ನಿರ್ಧರಿಸಿದ ಉಪಹಾರ ಕೇಂದ್ರ ಫ್ರೈ- ಅಪ್ ಗೆ ಜಾನ್ ಅವರ ಹೆಸರನ್ನೇ ಇಡುವ ಮೂಲಕ ಜಾನ್ಸ್ ಬ್ರೇಕ್ ಫಾಸ್ಟ್ ಎಂದು ಹೊಸ ಹೆಸರು ಘೋಷಿಸಿತು.

ಅದನ್ನು ಹೋಟೆಲ್ ನ ಮೆನುವಿನಲ್ಲಿ ಜಾನ್ ನೋಡಿ ತನ್ನ ಹೆಸರನ್ನು ಬ್ರೇಕ್ ಫಾಸ್ಟ್ ಗೆ ಇಟ್ಟಿರುವುದನ್ನು ಕಂಡು ಅಚ್ಚರಿಗೊಂಡರು. ಅವರ ನಗು, ನೋಟ ನೆಟ್ಟಿಗರ ಮನಗೆದ್ದಿದ್ದು ಹೋಟೆಲ್ ಕಾರ್ಯವನ್ನ ಹಲವರು ಮೆಚ್ಚಿಕೊಂಡಿದ್ದಾರೆ.

https://youtu.be/VKMGm-dJYl4

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...